ವಿರಾಜಪೇಟೆ/ಕೊಡಗು:ಹೊಸದಾಗಿ ಮನೆ ನಿರ್ಮಿಸಿ ಗೃಹ ಪ್ರವೇಶ ಮಾಡುವ ತವಕದಲ್ಲಿದ್ದ ವ್ಯಕ್ತಿ ಅದೇ ಮನೆಯ ಮೆಟ್ಟಿಲಿನಿಂದ ಆಯ ತಪ್ಪಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.
ವಿರಾಜಪೇಟೆ: ನಿರ್ಮಾಣ ಹಂತದ ಮನೆ ಮೆಟ್ಟಿಲಿನಿಂದ ಆಯ ತಪ್ಪಿ ಬಿದ್ದು ವ್ಯಕ್ತಿ ಸಾವು - ವಿರಾಜಪೇಟೆ ಪೊಲೀಸ್ ಠಾಣೆ
ನಿರ್ಮಾಣ ಹಂತದ ಹೊಸ ಮನೆಯ ಕೆಲಸ ನೋಡಿಕೊಂಡು ಬರುವುದಾಗಿ ನಿನ್ನೆ ಸಂಜೆ ತೆರಳಿದ್ದರು. ಇಂದು ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಮನೆ ಹತ್ತಿರ ತೆರಳಿದಾಗ ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದಿರುವಂತೆ ಅನಿಲ್ ಶವ ಪತ್ತೆಯಾಗಿದೆ.
ನಿರ್ಮಾಣ ಹಂತದ ಮನೆ ಮೆಟ್ಟಿಲಿನಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು
ಚಂದಪಂಡ ಅನಿಲ್ ಅಪ್ಪಣ್ಣ (42) ಮೃತ ದುರ್ದೈವಿ. ತಾಲೂಕಿನ ಅರ್ಜಿ ಗ್ರಾಮದಲ್ಲಿ ನಿರ್ಮಾಣ ಹಂತದ ಹೊಸ ಮನೆಯ ಕೆಲಸ ನೋಡಿಕೊಂಡು ಬರುವುದಾಗಿ ನಿನ್ನೆ ಸಂಜೆ ತೆರಳಿದ್ದರು. ಇಂದು ಮನೆಯ ಬಳಿ ಆಟವಾಡುತ್ತಿದ್ದ ಮಕ್ಕಳು ಮನೆ ಹತ್ತಿರ ತೆರಳಿದಾಗ ಮೆಟ್ಟಿಲುಗಳ ಮೇಲೆ ಮುಗ್ಗರಿಸಿ ಬಿದ್ದಿರುವಂತೆ ಅನಿಲ್ ಶವ ಪತ್ತೆಯಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ನಗರ ಪೊಲೀಸರು ಆಗಮಿಸಿ ಸ್ಥಳ ಮಹಜರು ಮಾಡಿ ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.