ಕರ್ನಾಟಕ

karnataka

ETV Bharat / state

ವಿರಾಜಪೇಟೆ: ಕಾಡಾನೆ ದಾಳಿಗೆ ಅರಣ್ಯ ರಕ್ಷಕ ಬಲಿ - ವಿರಾಜಪೇಟೆಯಲ್ಲಿ ಅರಣ್ಯ ಸಿಬ್ಬಂದಿ ಮೇಲೆ ಆನೆ ದಾಳಿ

ವಿರಾಜಪೇಟೆ ತಾಲೂಕಿನ ದೊಡ್ಡಳ್ಳ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗ ಅರಣ್ಯ ರಕ್ಷಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

Man died by Elephant attack in Virajpet
ವಿರಾಜಪೇಟೆ ಬಳಿ ಕಾಡಾನೆ ದಾಳಿಗೆ ಅರಣ್ಯ ರಕ್ಷಕ ಬಲಿ

By

Published : Dec 24, 2020, 8:23 PM IST

ವಿರಾಜಪೇಟೆ (ಕೊಡಗು): ಕಾಡಾನೆ ದಾಳಿಗೆ ಅರಣ್ಯ ಇಲಾಖೆಯ ನೌಕರ ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ದೊಡ್ಡಳ್ಳ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಗುರುರಾಜ್ (52) ಮೃತಪಟ್ಟ ಅರಣ್ಯ ರಕ್ಷಕ.‌ ಈತ ಮಧ್ಯಾಹ್ನ ಬೀಟ್‌ಗೆ ಹೋಗಿದ್ದಾಗ ಏಕಾಏಕಿ ದಾಳಿ‌ ಮಾಡಿದ ಒಂಟಿ ಸಲಗ ದಂತದಿಂದ ಹೊಟ್ಟೆಯ ಭಾಗಕ್ಕೆ ತಿವಿದಿದೆ.‌ ಪರಿಣಾಮ ತೀವ್ರ ರಕ್ತಸ್ರಾವದಿಂದ ಗುರುರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಓದಿ : ರಾಜಕೀಯ ವೈಷಮ್ಯ; ರಾಗಿ ಬಣವೆಗೇ ಬೆಂಕಿ ಇಟ್ಟ ಕಿಡಿಗೇಡಿಗಳು!!

ದಕ್ಷಿಣ ಕೊಡಗಿನಲ್ಲಿ ಕಾಡಾನೆ ಹಾಗೂ ಹುಲಿ ದಾಳಿ ಪ್ರಕರಣಗಳು ಇತ್ತೀಚೆಗೆ ಸಾಮಾನ್ಯವಾಗಿದ್ದು, ಅರಣ್ಯ ಇಲಾಖೆ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.‌

For All Latest Updates

TAGGED:

ABOUT THE AUTHOR

...view details