ಕರ್ನಾಟಕ

karnataka

ETV Bharat / state

ಸಾಲ ವಾಪಸ್​ ಕೇಳಿದ್ದಕ್ಕೆ ಬ್ಯಾಂಕ್​ ವ್ಯವಸ್ಥಾಪಕನ ಮೇಲೆಯೇ ಕತ್ತಿ ಬೀಸಿದ..! - man attacked to bank Manager news

ಕೊಟ್ಟ ಸಾಲ ವಾಪಸ್​ ಕಟ್ಟುವಂತೆ ಕೇಳಿದ್ದಕ್ಕೆ ಸಹಕಾರಿ ಸಂಘದ ವ್ಯವಸ್ಥಾಪಕನ ಮೇಲೆಯೇ ವ್ಯಕ್ತಿಯೊಬ್ಬ ಕತ್ತಿ ಬೀಸಿದ ಘಟನೆ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದಲ್ಲಿ ನಡೆದಿದೆ‌.

ಬ್ಯಾಂಕ್​ ವ್ಯವಸ್ಥಾಪಕನ ಮೇಲೆ ಹಲ್ಲೆ

By

Published : Nov 12, 2019, 11:08 AM IST

ಕೊಡಗು: ಸಾಲ ಪಾವತಿಸುವಂತೆ ಕೇಳಿದ್ದಕ್ಕೆ ಪರಸ್ಪರ ವಾಗ್ವಾದ ನಡೆದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಲೋಕೇಶ್ ಎಂಬಾತನ ಮೇಲೆ ವ್ಯಕ್ತಿಯೊಬ್ಬ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ.

ಬ್ಯಾಂಕ್​ ವ್ಯವಸ್ಥಾಪಕನ ಮೇಲೆ ಹಲ್ಲೆ

ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ಇಬ್ನಿವಾಳವಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅದೇ ಗ್ರಾಮದ ಸಾಬ ಗಣಪತಿ ಎಂಬಾತ ಮಾರಾಟಕ್ಕೆ ಇಟ್ಟಿದ್ದ ಕತ್ತಿಯಿಂದ ಲೋಕೇಶ್ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಲೋಕೇಶ್‌ನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೃಷಿ ಪತ್ತಿನ ಸಹಕಾರ ಸಂಘದಿಂದ ಆರೋಪಿ ಗಣಪತಿ ಒಟ್ಟು 10 ಸಾವಿರ ಹಣ ಸಾಲ ಪಡೆದಿದ್ದು ಇನ್ನೂ 2,500 ಹಣ ಬಾಕಿ ಹಣ ಉಳಿಸಿಕೊಂಡಿದ್ದ ಎನ್ನಲಾಗಿದೆ.‌ ಈ ಬಗ್ಗೆ ಸಹಕಾರ ಸಂಘದ ವ್ಯವಸ್ಥಾಪಕ ಲೋಕೇಶ್, ಬಾಕಿ ಹಣ ಮರು ಪಾವತಿಸುವಂತೆ ಕೇಳಿದ್ದಾನೆ. ಇದೇ ವಿಚಾರಕ್ಕೆ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿ ಆರೋಪಿ ಗಣಪತಿ ಪಕ್ಕದಲ್ಲೇ ಇದ್ದ ಕತ್ತಿಯಿಂದ ತಲೆ ಭಾಗಕ್ಕೆ ಹಲ್ಲೆ ಮಾಡಿ ಕತ್ತಿ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ‌

ABOUT THE AUTHOR

...view details