ಸೋಮವಾರಪೇಟೆ:ರಂಜಾನ್ ಹಬ್ಬದ ದಿನದಂದು ಪಟ್ಟಣದ ಮಹದೇಶ್ವರ ಬ್ಲಾಕ್‍ನಲ್ಲಿ ಮನೆ ಹಾಗೂ ಕಾರುಗಳಿಗೆ ಕಲ್ಲು ತೂರಿ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮನೆ-ವಾಹನಗಳ ಮೇಲೆ ಕಲ್ಲು ತೂರಿದ್ದ ಆರೋಪಿಯ ಬಂಧನ - ರಂಜಾನ್ ದಿನ ಕಲ್ಲು ತೂರಾಟ
ನಗರದ ಮಹದೇಶ್ವರ ಬ್ಲಾಕ್‍ನಲ್ಲಿ ರಂಜಾನ್ ಹಬ್ಬದಂದು ಕಲ್ಲು ತೂರಾಟ ನಡೆಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Accused arrest
ನಗರದ ಮಹದೇಶ್ವರ ಬ್ಲಾಕ್ ನಿವಾಸಿ ಸಂತೋಷ್ ಬಂಧಿತ ಆರೋಪಿ. ಏಪ್ರಿಲ್ 24ರ ಮಧ್ಯರಾತ್ರಿ ಎಂಡಿ ಬ್ಲಾಕ್‍ನ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಅಬಕಾರಿ ಇಲಾಖೆಯ ಒಂದು ಜೀಪು ಸೇರಿದಂತೆ ನಾಲ್ಕು ಕಾರುಗಳಿಗೆ ಕಲ್ಲು ತೂರಿ ಗಾಜುಗಳನ್ನು ಜಖಂಗೊಳಿಸಲಾಗಿತ್ತು. ನಂತರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮರಾ ದೃಶ್ಯವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.