ಮೈಸೂರು: ತನ್ನ ಜಮೀನಿನ ಹೂ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪಿರಿಯಾಪಟ್ಟಣದ ಚಿಕ್ಕವಡ್ಡಕೇರಿಯಲ್ಲಿ ನಡೆದಿದೆ.
ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಚಿಕ್ಕವಡ್ಡಕೇರಿಯ ನಿವಾಸಿ ಹರೀಶ್ ಎಂಬುವವನೇ ಆರೋಪಿಯಾಗಿದ್ದು, ಈತ ತನ್ನ ಜಮೀನಿನಲ್ಲಿ ಬೆಳೆದ ಕನಕಾಂಬರ ಹೂವಿನ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ.