ಮಡಿಕೇರಿ(ಕೊಡಗು): ಇಲ್ಲಿನ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಮಧ್ಯಾಹ್ನ ನಿಗದಿಯಾಗಿದ್ದ ಚುನಾವಣೆಯನ್ನು ಚುನಾವಣಾಧಿಕಾರಿ ದಿಢೀರ್ ರದ್ದುಗೊಳಿಸಿದ್ದಾರೆ.
ಕಾಂಗ್ರೆಸ್ ಎಂಎಲ್ಸಿ ವೀಣಾ ಅಚ್ಚಯ್ಯಗೆ ಚುಣಾವಣೆಯ ನೋಟಿಸ್ ತಲುಪದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಿ ಚುನಾವಣಾಧಿಕಾರಿ ಈಶ್ವರ್ ಖಂಡು ಆದೇಶಿಸಿದ್ದಾರೆ.
ಚುನಾವಣಾ ರದ್ಧತಿ ಸಂಬಂಧ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ಚುನಾವಣಾಧಿಕಾರಿ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮೈಸೂರು ಮತ್ತು ಕೊಡಗು ಸಂಸದ ಪ್ರತಾಪ್ ಸಿಂಹ, ಎಂಎಲ್ಸಿ ಸುನಿಲ್ ಸುಬ್ರಹ್ಮಣ್ಯ, ಶಾಸಕರಾದ ಅಪ್ಪಚ್ಚು ರಂಜನ್, ಬೋಪ್ಪಯ್ಯ ಅವರು ಚುನಾವಣಾ ರದ್ದು ಮಾಡದಂತೆ ಪ್ರತಿಭಟನೆ ಮಾಡಿದರು.
'ಚುನಾವಣಾಧಿಕಾರಿಗೆ ಚುನಾವಣೆಯನ್ನು ಮುಂದೂಡುವ ಯಾವುದೇ ಅಧಿಕಾರವಿಲ್ಲ. ಆದರೂ ಚುನಾವಣೆ ಮುಂದೂಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬಿಜೆಪಿ 16 ಸದಸ್ಯರನ್ನು ಹೊಂದಿದ್ದು, ಇತರೆ ಪಕ್ಷಗಳು ಒಟ್ಟಿಗೆ ಸೇರಿದ್ರೂ, ಕೇವಲ ಏಳು ಸದಸ್ಯ ಬಲವಿದೆ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಕಾರಣಕ್ಕಾಗಿ ಚುನಾವಣೆ ಮುಂದೂಡಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ನೋಟಿಸ್ ಹೋಗಿಲ್ಲ ಅಂದ್ರೆ ಅದು ಚುನಾವಣಾಧಿಕಾರಿ ತಪ್ಪು. ಆದ್ರೆ ಚುನಾವಣೆ ಮುಂದೂಡುವುದು ಸರಿಯಲ್ಲ' ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಜೀವದ ಹಂಗು ತೊರೆದು ಬಾವಿಗೆ ಬಿದ್ದಿದ್ದ ಆರೋಪಿ ರಕ್ಷಿಸಿದ ಕಾನ್ಸ್ಟೇಬಲ್ಗೆ ಮೆಚ್ಚುಗೆ