ಕೊಡಗು: ನಾಳೆ ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯ ಕೂಡ ತೆರೆಯಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ನಡೆಸಲಾಗಿದೆ.
ಮಡಿಕೇರಿ: ಭಕ್ತರಿಗೆ ದರ್ಶನ ನೀಡಲು ಸಿದ್ಧನಾಗುತ್ತಿದ್ದಾನೆ ಓಂಕಾರೇಶ್ವರ - ಕೊರೊನಾ ಎಫೆಕ್ಟ್
ಮಡಿಕೇರಿಯ ಪ್ರಸಿದ್ಧ ಓಂಕಾರೇಶ್ವರ ದೇವಾಲಯ ಕೂಡ ತೆರೆಯಲಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ನಡೆಸಲಾಗಿದೆ.
![ಮಡಿಕೇರಿ: ಭಕ್ತರಿಗೆ ದರ್ಶನ ನೀಡಲು ಸಿದ್ಧನಾಗುತ್ತಿದ್ದಾನೆ ಓಂಕಾರೇಶ್ವರ Madikeri: Lord Omkareshwara is ready to offer darshan to devotees](https://etvbharatimages.akamaized.net/etvbharat/prod-images/768-512-7514277-52-7514277-1591521471721.jpg)
ದೇವಸ್ಥಾನದಲ್ಲಿ ದರ್ಶನದ ವೇಳೆ ಅಂತರ ಕಾಯ್ದಿರಿಸುವ ಸಲುವಾಗಿ ಪ್ರತಿ ಮೂರು ಅಡಿಗೆ ಒಂದು ಮಾರ್ಕ್ ಮಾಡಲಾಗಿದೆ. ದೇವಾಲಯಕ್ಕೆ ಬರಬೇಕಾದರೆ ಮುಂಭಾಗದಲ್ಲಿರುವ ಆಂಜನೇಯ ದೇವಾಲಯದ ಬಳಿಯಿಂದ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಮಾಸ್ಕ್ ಧರಿಸುವಂತೆ ಕಡ್ಡಾಯಗೊಳಿಸಿದೆ. ಅಲ್ಲದೆ ಸ್ಯಾನಿಟೈಸರ್ ಸಿಂಪಡಣೆ ವ್ಯವಸ್ಥೆ ಕೂಡ ಮಾಡಿದೆ.
ಇನ್ನೂ ದೇವಸ್ಥಾನಕ್ಕೆ ಚಿಕ್ಕ ಮಕ್ಕಳಿಗೆ ಮತ್ತು ವೃದ್ಧರಿಗೆ ಪ್ರವೇಶ ಅವಕಾಶವನ್ನು ನಿರಾಕರಿಸಿದೆ. ಈ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳ ಅನುಸರಿಸುವ ಮೂಲಕ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತಿದೆ. ಆದರೆ, ಯಾವುದೇ ತೀರ್ಥ ಪ್ರಸಾದ, ಕುಂಕುಮ ವಿತರಣೆ ಇರುವುದಿಲ್ಲ ಎಂದು ದೇವಾಲಯದ ಅರ್ಚಕರು ಸ್ಪಷ್ಟಪಡಿಸಿದ್ದಾರೆ.