ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಕುಖ್ಯಾತ ಬಂದೂಕು ಕಳ್ಳರ ಸೆರೆ... ಕದ್ದ ಮಾಲು ಮಾರಾಟವಾಗುತ್ತಿದ್ದು ಎಲ್ಲಿ? - undefined

ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ಮನೆಯಲ್ಲಿದ್ದ, ಬಂದೂಕುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂದೂಕುಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳರು

By

Published : Mar 25, 2019, 4:39 PM IST

ಕೊಡಗು: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿಕೊಂಡು ಬೆಲೆಬಾಳುವ ಬಂದೂಕುಗಳನ್ನು ಕಳವು ಮಾಡುತ್ತಿದ್ದ, ನಾಲ್ವರು ಕಳ್ಳರನ್ನು ಪೊಲೀಸರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರು ಕಳ್ಳತನ ಮಾಡಿ ಹೊರ ರಾಜ್ಯದಲ್ಲಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಮೈಸೂರು ರಸ್ತೆಯಲ್ಲಿಇರುವ ನಿವೃತ್ತ ಸೇನಾಧಿಕಾರಿ ಕೆ. ಜಿ. ಉತ್ತಯ್ಯ ಎಂಬುವವರು ಕುಟುಂಬ ಸಮೇತ ಹೊರಹೋಗಿದ್ದರು. ಈ ಸಂದರ್ಭ ನೋಡಿಕೊಂಡ ಕಳ್ಳರು ಹಿಂಬಾಗಿಲನ್ನು ಮುರಿದು ಬೆಲೆಬಾಳುವ ಎರಡು ಬಂದೂಕನ್ನು ಕಳ್ಳತನ ಮಾಡಿದ್ದಾರೆ. ಹಾಗೂ ಮನೆಯೊಳಗಿದ್ದ ಯುಟಿಲೈಟೆಕ್ಸ್ ಫ್ರೆಂಚ್ ಮೈಕ್​​ನ ಎ787 ಸಂಖ್ಯೆಯ ಒಂಟಿ ನಳಿಗೆ ಮತ್ತು ನಂಬರ್ 1197ರ ಎಹೋಲಿಸ್ ಅಂಡ್ ಸನ್ಸ್, ಲಂಡನ್ ಮೂಲದ ಡಬಲ್ ಬ್ಯಾರಲ್ ಗನ್ ಕಳ್ಳತನ ಮಾಡಿದ್ದಾರೆ.

ಅಂದಾಜು 2, 50, 000 ವೆಚ್ಚದ ಬಂದೂಕು ಇದಾಗಿದ್ದು, ದುಪಟ್ಟು ಹಣಕ್ಕೆ ಮಾರಾಟ ಮಾಡಲು ಈ ತಂಡ ಸಿದ್ಧತೆ ನಡೆಸುತ್ತಿತ್ತು ಎನ್ನಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಗಿರೀಶ್ ಮತ್ತು ರಾಜೇಶ್ ಎಂಬುವವರ ನೆರವಿನಿಂದ ವಿರಾಜಪೇಟೆ ಮೂಲದ ದೀಪು ಕುಮಾರ್, ಮೊಣ್ಣಪ್ಪ, ಸುಬೇರ್ ಎಂಬುವವರನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಉಳಿದವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಇದೇ ರೀತಿಯಲ್ಲಿ ಬಂದೂಕು ಕಳ್ಳತನ ಮಾಡಿ, ನೆರೆಯ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಬಂದೂಕುಗಳು ಯಾರಿಗೆ ಮಾರಾಟವಾಗಿವೆ, ಕಳುವಾದ ಬಂದೂಕುಗಳನ್ನು ಯಾವುದಾರೂ ಕೃತ್ಯಕ್ಕೆ ಬಳಸಲಾಗಿದೆಯೇ ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.

For All Latest Updates

TAGGED:

ABOUT THE AUTHOR

...view details