ಕೊಡಗು: ಹಸಿರ ಕಾನನದ ನಡುವೆ ಸುಂದರ ಜಲಪಾತ, ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರು.. ಇದು ಕೊಡಗು ಜಿಲ್ಲೆಯಲ್ಲಿರುವ ಅಬ್ಬಿ ಜಲಪಾತದ ವೈಭವ. ವೀಕೆಂಡ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು ಅಬ್ಬಿ ಸೌಂದರ್ಯ ಕಂಡು ಖುಷ್ ಆಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಪ್ರವಾಸಿ ತಾಣಗಳಿಗೆ ಜೀವ ಕಳೆ ಬಂದಿದೆ. ಅಬ್ಬಿ ಕೂಡ ಮೈದುಂಬಿ ಹರಿಯುತ್ತಿದ್ದು, ಜಲಪಾತ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ವಾರಂತ್ಯ ಹಾಗೂ ಮಕ್ಕಳ ರಜಾ ದಿನಗಳ ಮಜಾ ಅನುಭವಿಸಲು ರಾಜ್ಯ ಮಾತ್ರವಲ್ಲದೇ, ಹೊರ ರಾಜ್ಯಗಳಿಂದಲೂ ಸಹ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದು, ಜಲಪಾತ ಹಾಗೂ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸುತ್ತಿದ್ದಾರೆ.