ಕೊಡಗು: ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಮಳೆಯಿಂದ ಪ್ರವಾಹದ ಪರಿಣಾಮ ಹೆಚ್ಚಾಗಿದ್ದು, ಜಿಲ್ಲೆಯಲ್ಲಿ ಇದುವರೆಗೆ 52 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಒಟ್ಟು 14 ಪ್ರದೇಶಗಳಲ್ಲಿ ಭೂಕುಸಿತವಾಗಿದ್ದು, 9 ಪರಿಹಾರ ಕೇಂದ್ರಗಳಿಗೆ 591 ಜನರನ್ನು ಸ್ಥಳಾಂತರಿಸಲಾಗಿದೆ.
ಕೊಡಗಿನಲ್ಲಿ ತಗ್ಗಿದ ಮಳೆಯ ಅಬ್ಬರ: 52 ಪ್ರದೇಶಗಳಲ್ಲಿ ಪ್ರವಾಹ, 591 ಜನರ ಸ್ಥಳಾಂತರ
ಆಶ್ಲೇಷ ಮಳೆಯ ಅಬ್ಬರ ಕೊಡಗಿನಲ್ಲಿ ಕೊಂಚ ಕಡಿಮೆಯಾಗಿದ್ದು, ಪ್ರವಾಹದ ಪರಿಣಾಮ ಹಲವು ಪ್ರದೇಶಗಳು ಜಲಾವೃತವಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ 591 ಜನರನ್ನು ಸ್ಥಳಾಂತರ ಮಾಡಲಾಗಿದೆ.
ಕೊಡಗಿನಲ್ಲಿ ತಗ್ಗಿದ ಮಳೆಯ ಅಬ್ಬರ
ಭೂ ಕುಸಿತದಿಂದಾಗಿ 8 ಕಡೆ ರಸ್ತೆ ಸಂಚಾರ ಕಡಿತವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ನದಿ ಪಾತ್ರದ ನಿವಾಸಿಗಳಿಗೆ ಪ್ರವಾಹದ ಭೀತಿ ದೂರವಾಗಿಲ್ಲ. ವಿರಾಜಪೇಟೆ ತಾಲೂಕಿನಲ್ಲಿರುವ ಅರಮೇರಿ ಕಳಂಚೇರಿ ಮಠ, ಲಿಂಗ ವೀರರಾಜೇಂದ್ರ ಪ್ರಸಾದ ಭವನ ಜಲಾವೃತವಾಗಿದ್ದು, ಭವನದಲ್ಲಿದ್ದ ವಿವಿಧ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ ಹಾನಿಯಾಗಿದೆ.
ವಿದ್ಯುತ್ ಸಂಪರ್ಕ ಕಡಿತಗೊಂಡು ಮಠದ ಜನರು ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕಳೆದ ಬಾರಿಯೂ ಅರಮೇರಿ ಕಳಂಚೇರಿ ಮಠ ಪ್ರವಾಹದಲ್ಲಿ ಮುಳುಗಿತ್ತು.