ಕರ್ನಾಟಕ

karnataka

ETV Bharat / state

ದಂಪತಿ ಚಿಕಿತ್ಸೆಗೂ ತಟ್ಟಿದ ಲಾಕ್‌ಡೌನ್ ಬಿಸಿ..! - ಕೊಡಗು ದಂಪತಿಗಳ ಕಷ್ಟ

ಅಪಘಾತದಿಂದ ಕಾಲು ಕಳೆದುಕೊಂಡಿದ್ದ ಪತಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೂ ತೆರಳಲು ನಮ್ಮಿಂದ ಸಾಧ್ಯವಾಗುತ್ತಿಲ್ಲ, ಹೀಗಾದರೆ ಮುಂದೇನು ಎಂಬುದು ತೋಚದಾಗಿದೆ ಎಂದು ಕುಟುಂಬವೊಂದು ಗೋಳಿಡುತ್ತಿದೆ.

Lockdown effected
ಲಾಕ್​ಡೌನ್​​ನಿಂದ ಸಂಕಷ್ಟಕ್ಕೊಳಗಾದ ದಂಪತಿ

By

Published : Apr 24, 2020, 8:41 PM IST

ಕುಶಾಲನಗರ(ಕೊಡಗು): ಅಪಘಾತವಾಗಿ ಸ್ವಾಧೀನ ಕಳೆದುಕೊಂಡ ವ್ಯಕ್ತಿಯ ಚಿಕಿತ್ಸೆಗೂ ಲಾಕ್‌ಡೌನ್ ಎಫೆಕ್ಟ್ ಬಿಸಿ ತಟ್ಟಿರುವ ಘಟನೆ ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿ ಕಂಡು ಬಂದಿದೆ.

ಕೊಡಗು ಜಿಲ್ಲೆ ಕುಶಾಲನಗರದ ಕರಿಯಪ್ಪ ಬಡಾವಣೆಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ಜೀವನ ನಡಸುತ್ತಿರುವ ವಿಲ್ಸ್‌ನ್ ಹಾಗೂ ಜಯಲಕ್ಷ್ಮಮ್ಮ ದಂಪತಿಗೆ ಲಾಕ್​​ಡೌನ್​​ನಿಂದಾಗಿ ಸೂಕ್ತ ಚಿಕಿತ್ಸೆ ದೊರಕದೇ ಸಂಕಷ್ಟ ಅನುಭವಿಸುತ್ತಿದ್ದಾರೆ.

ಲಾಕ್​ಡೌನ್​​ನಿಂದ ಸಂಕಷ್ಟಕ್ಕೊಳಗಾದ ದಂಪತಿ

ಗಾರೆ ಕೆಲಸ ಮಾಡಿಕೊಂಡಿದ್ದ ವಿಲ್ಸನ್‌ಗೆ ಅಪಘಾತ ಸಂಭವಿಸಿದ ಪರಿಣಾಮ ಕಾಲು ಸ್ವಾಧೀನ ಕಳೆದುಕೊಂಡಿದೆ. ಇದರಿಂದ ಕೆಲಸವನ್ನೂ ಮಾಡಲು ಸಾಧ್ಯವಾಗದಷ್ಟು ಅಸಹಾಯಕರಾಗಿಬಿಟ್ಟಿದ್ದಾರೆ.

ಮಂಗಳೂರಿನ ಸುಳ್ಯ ಆಸ್ಪತ್ರೆಯೊಂದರಲ್ಲಿ ಇವರಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಕೊವೀಡ್-19 ಪರಿಣಾಮ ಅಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ನನಗೂ ಆರೋಗ್ಯ ಕೂಡಾ ಸರಿಯಿಲ್ಲ, ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಜೀವನ ನಡೆಸಬೇಕೋ ಎಂಬುದು ತಿಳಿಯದಾಗಿದೆ ಎಂದು ಪತ್ನಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details