ಸೋಮವಾರಪೇಟೆ(ಕೊಡಗು):ಲಾಕ್‌ಡೌನ್ ಪರಿಣಾಮ ಮಾರುಕಟ್ಟೆ ಸಿಗದಿದ್ದಕ್ಕೆ ರೈತ ಮಹಿಳೆಯೊಬ್ಬಳು ತನ್ನ ಹೊಲದಲ್ಲಿ ಬೆಳೆದಿದ್ದ ಚೆಂಡು ಹೂಗಳನ್ನು ತಾನೆ ಟ್ರ್ಯಾಕ್ಟರ್‌ನಿಂದ ಹೊಡೆಸಿರುವ ಮನಕಲಕುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಅವರೇದಾಳು ಗ್ರಾಮದಲ್ಲಿ ನಡೆದಿದೆ.
ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಚೆಂಡು ಹೂ ನಾಶ ಮಾಡಿದ ಮಹಿಳೆ: ಪರಿಹಾರ ಕೇಳಿ ಆತ್ಮಹತ್ಯೆ ಬೆದರಿಕೆ - Lockdown Effect
ಲಾಕ್‌ಡೌನ್ ಘೋಷಿಸಿದ ಪರಿಣಾಮ ಸಾವಿರಾರು ರೂಪಾಯಿ ವ್ಯಯಿಸಿ ಬೆಳೆದಿದ್ದ ಚೆಂಡು ಹೂಗಳನ್ನು ಸರಿಯಾದ ಸಮಯಕ್ಕೆ ಮಾರಾಟ ಮಾಡಲು ಆಗದೆ ನಷ್ಟಕ್ಕೀಡಾದ ರೈತ ಮಹಿಳೆಯೊಬ್ಬಳು ಹೂ ಬೆಳೆಯನ್ನೇ ನಾಶ ಮಾಡಿದ್ದಾರೆ. ಜೊತೆಗೆ ಸರ್ಕಾರ ಸೂಕ್ತ ಪರಿಹಾರ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಲಾಕ್‌ಡೌನ್ ಎಫೆಕ್ಟ್: ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಚೆಂಡು ಹೂ ನಾಶ
ಸೋಮವಾರಪೇಟೆ ತಾಲ್ಲೂಕಿನ ಅವರೇದಾಳು ಗ್ರಾಮದ ಭಾಗೀರಥಿ ಎಂಬ ಮಹಿಳೆ 3 ಎಕರೆ ಪ್ರದೇಶದಲ್ಲಿ ಚಂಡು ಹೂಗಳನ್ನು ಬೆಳೆದಿದ್ದರು. ಲಾಕ್‌ಡೌನ್ ಘೋಷಿಸಿದ ಪರಿಣಾಮ ಸಾವಿರಾರು ರೂಪಾಯಿ ವ್ಯಯಿಸಿ ಬೆಳೆದಿದ್ದ ಚೆಂಡು ಹೂಗಳನ್ನು ಸರಿಯಾದ ಸಮಯಕ್ಕೆ ಮಾರಾಟ ಮಾಡಲು ಆಗದೆ ನಷ್ಟ ಅನುಭವಿಸಬೇಕಾಗಿದೆ.
ಸದ್ಯ ಈಕೆ ಹೊಲದಲ್ಲಿ ಬೆಳೆದಿದ್ದ ಚಂಡು ಹೂಗಳನ್ನು ಟ್ರ್ಯಾಕ್ಟರ್‌ನಿಂದ ಹೊಡೆಸಿ ನಾಶ ಮಾಡಿದ್ದಾರೆ. ಜೊತೆಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿಕಕೊಂಡಿದ್ದು, ಕೊಡದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಅಳಲು ತೋಡಿಕೊಂಡಿದ್ದಾರೆ.