ಕರ್ನಾಟಕ

karnataka

ETV Bharat / state

ಮಡಿಕೇರಿ: ಟ್ರಕ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ ಜಾರ್ಖಂಡ್​ ನಿವಾಸಿಗಳು - ಕೊಡಗು

ಜಾರ್ಖಂಡ್ ರಾಜ್ಯದಿಂದ ಕೆಲಸಕ್ಕಾಗಿ ಕೊಡಗು ಜಿಲ್ಲೆಗೆ ಬಂದಿದ್ದ ಸುಮಾರು 10 ಜನ ಕೂಲಿ ಕಾರ್ಮಿಕರು ಲಾಕ್​ಡೌನ್‌ನಿಂದಾಗಿ ಟ್ರಕ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ.

Jarkhand peoples
ಜಾರ್ಖಂಡ್​ ನಿವಾಸಿಗಳು

By

Published : Apr 3, 2020, 1:01 PM IST

ಕೊಡಗು:ಜಾರ್ಖಂಡ್ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಲಾಕ್‌ಡೌನ್ ಘೋಷಣೆಯಾದ ದಿನಗಳಿಂದಲೂ ಮಡಿಕೇರಿಯ ಹಾಕಿ ಕ್ರೀಡಾಂಗಣದ ಎದುರು ಟ್ರಕ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ.

ಟ್ರಕ್‌ನಲ್ಲೇ ಕಾಲ ಕಳೆಯುತ್ತಿರುವ ಜಾರ್ಖಂಡ್​ ನಿವಾಸಿಗಳು

ಜಾರ್ಖಂಡ್‌ನಿಂದ ಸುಮಾರು 10 ಮಂದಿ ಕೂಲಿ ಕಾರ್ಮಿಕರು ಬಿಎಸ್‌ಎನ್‌ಎಲ್ ಕೇಬಲ್ ಕೆಲಸಕ್ಕೆ ಬಂದಿದ್ದರು. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಪರಿಣಾಮ ಇವರೆಲ್ಲರೂ ಕೆಲಸವಿಲ್ಲದೆ ಹಲವು ದಿನಗಳಿಂದ ಟ್ರಕ್‌ನಲ್ಲೇ ದಿನದೂಡುತ್ತಿದ್ದಾರೆ.

ಅಲ್ಲದೇ ಪಕ್ಕದಲ್ಲೇ ಟ್ಯಾಂಕರ್‌ ನೀರಿನಿಂದ ಸ್ನಾನ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಮಾಲೀಕರು ದಿನ ಬಿಟ್ಟು ದಿನ ಆಹಾರ ತಂದು ಕೊಡುತ್ತಿದ್ದಾರೆ. ಎಲ್ಲರೂ ಲಾರಿಯಲ್ಲೇ ಮಲುಗುತ್ತಿದ್ದೇವೆ. ಅಷ್ಟು ಸಮಸ್ಯೆ ಆಗುತ್ತಿಲ್ಲ. ಆದರೆ ಹೊರಗೆ ಶೌಚಾಲಯಕ್ಕೆ ಹಾಗೂ ಕುಡಿಯಲು ನೀರಿಲ್ಲ. ಹೊರಗೆ‌ ಹೋಗಬೇಕಾದ್ರೆ ಮಾಸ್ಕ್ ಧರಿಸಬೇಕು. ಹಲವೆಡೆ ವಿಚಾರಿಸಿದ್ರೂ ಮಾಸ್ಕ್‌ಗಳೇ ಸಿಗುತ್ತಿಲ್ಲ. ಮಾಸ್ಕ್ ಧರಿಸದಿದ್ದರೆ ಪೊಲೀಸರು ಗದರಿಸುತ್ತಾರೆ. ನಮಗೆ ಆಹಾರಕ್ಕಿಂತ ಮುಖ್ಯವಾಗಿ ಮಾಸ್ಕ್‌ಗಳ ಅಗತ್ಯವಿದೆ. ಯಾರಾದರೂ ಮಾಸ್ಕ್ ಕೊಟ್ಟರೆ ಬಹಳ ಅನುಕೂಲವಾಗುತ್ತೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

ABOUT THE AUTHOR

...view details