ಕೊಡಗು (ತಲಕಾವೇರಿ): ಕಣ್ಮರೆಯಾಗಿರುವ ನಾರಾಯಣ ಆಚಾರ್ ಮೂಲತಃ ಅರ್ಚಕ ಹಾಗೂ ಕೃಷಿಕ ಕುಟುಂಬದವರು. ಹೀಗಾಗಿ ಅವರು ಸಂಪತ್ತು ಹೊಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮನೆಯೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧ ಕೂಡ ಅವರು ಮನೆ ಬಿಟ್ಟು ತೆರಳಲು ನಿರಾಕರಿಸಿರಬಹುದು ಎನ್ನಲಾಗುತ್ತಿದೆ.
ಮಕ್ಕಳು ಹೇಳಿದ್ದರೂ ಅರ್ಚಕ ಆಚಾರ್ ಮನೆ ಬಿಟ್ಟು ಬಾರದಿರಲು ಕಾರಣವೇನು? - ನಾರಾಯಣ ಆಚಾರ್ ಆಸ್ತಿ ಸುದ್ದಿ
ಅರ್ಚಕ ಮತ್ತು ಕೃಷಿಕರಾದ್ದರಿಂದ ನಾರಾಯಣ ಆಚಾರ್, ಸಹಜವಾಗಿಯೇ ಸಂಪತ್ತು ಹೊಂದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅರ್ಚಕ, ಕೃಷಿಕರಾದ್ದರಿಂದ ನಾರಾಯಣ ಆಚಾರ್ ಸಂಪತ್ತು ಹೊಂದಿರಬಹುದು
ಸ್ಥಳೀಯರ ಪ್ರತಿಕ್ರಿಯೆ
ನಾರಾಯಣ ಆಚಾರ್ಗೆ ಕಾಫಿ, ಏಲಕ್ಕಿ ತೋಟವಿದೆ. ಹಾಗೆಯೇ ಅವರ ಕುಟುಂಬ ತಲತಲಾಂತರದಿಂದ ಅರ್ಚಕ ವೃತ್ತಿ ಮಾಡುತ್ತಿದೆ. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಅವರ ಬಳಿ ಆಸ್ತಿ ಇರಬಹುದು ಎಂಬುದು ಸ್ಥಳೀಯ ನಿವಾಸಿ ಸಂಜಯ್ ಅಭಿಪ್ರಾಯ.
ಕೆಲವರು ಮಾತನಾಡಿಕೊಳ್ಳುವ ರೀತಿಯಲ್ಲಿ ಅವರಿಗೆ ಅಷ್ಟು ಪ್ರಮಾಣದ ಆಸ್ತಿ ಇಲ್ಲದಿರಬಹುದು.ಮಕ್ಕಳು ಅವರಿಗೆ ಮನೆಬಿಟ್ಟು ಹೇಳಿದರೂ ಸಹ ಮನೆಯೊಂದಿಗಿನ ನಂಟನ್ನು ಬಿಡಲು ಆಗದಿದ್ದರಿಂದ ಈ ಅನಾಹುತ ಸಂಭವಿಸಿದೆ ಎಂಬುದು ಸಂಜಯ್ ಅನಿಸಿಕೆ.
Last Updated : Aug 11, 2020, 2:54 PM IST