ಕರ್ನಾಟಕ

karnataka

ETV Bharat / state

ಏರಿಯಾ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್: ಮತ್ತೆ ಸೀಲ್‌ಡೌನ್ ಮಾಡದಂತೆ ಸ್ಥಳೀಯರ ಒತ್ತಾಯ! - Kodagu

ಸೀಲ್‌ಡೌನ್ ಏರಿಯಾ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್ ವರದಿಯಾದ ಹಿನ್ನೆಲೆಯಲ್ಲಿ ಮತ್ತೆ ಏರಿಯಾವನ್ನು ಸೀಲ್‌ಡೌನ್ ಮಾಡದಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Opposition against the sealdown
ಸೀಲ್‌ಡೌನ್ ಮಾಡದಂತೆ ಸ್ಥಳೀಯರ ಆಗ್ರಹ

By

Published : Jul 15, 2020, 4:40 PM IST

ಶನಿವಾರಸಂತೆ/ಕೊಡಗು: ಸೀಲ್‌ಡೌನ್ ಏರಿಯಾ ತೆರವುಗೊಳಿಸುವಾಗ ಮತ್ತೊಂದು ಪಾಸಿಟಿವ್ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ತಮ್ಮ ಏರಿಯಾವನ್ನು ಸೀಲ್‌ಡೌನ್ ಮಾಡಬೇಡಿ ಎಂದು ಸ್ಥಳೀಯರು ಆಗ್ರಹಿಸಿದ ಘಟನೆ ಜಿಲ್ಲೆಯ ಶನಿವಾರಸಂತೆಯ ಗುಂಡೂರಾವ್ ಬಡಾವಣೆಯಲ್ಲಿ ನಡೆದಿದೆ.

ಸೀಲ್‌ಡೌನ್ ಮಾಡದಂತೆ ಸ್ಥಳೀಯರ ಆಗ್ರಹ

ಸೀಲ್‌ಡೌನ್ ಮಾಡಿ ತೆರವುಗೊಳಿಸುವಾಗ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆ ಮಹಿಳೆ ಗುಣಮುಖರಾಗಿ ಮನೆಗೆ ವಾಪಸಾಗಿದ್ದರು‌. ಆದರೆ ಇದೀಗ ಮಹಿಳೆಯ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಅಧಿಕಾರಿಗಳು ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ‌. ಆದರೆ ಏರಿಯಾವನ್ನು ಮತ್ತೆ ಸೀಲ್‌ಡೌನ್ ಮಾಡದಂತೆ ಆಗ್ರಹಿಸಿದ್ದಾರೆ.

ನಾಳೆ ಏರಿಯಾದ ಸೀಲ್‌ಡೌನ್ ತೆರೆವುಗೊಳಿಸಬೇಕಿತ್ತು. ಆದರೆ ಮತ್ತೊಂದು ಪಾಸಿಟಿವ್ ವರದಿ ಬಂದಿರುವುದರಿಂದ ಮತ್ತೆ ಸೀಲ್‌ಡೌನ್ ಮಾಡುವ ಸಾಧ್ಯತೆಗಳಿವೆ. ಬಡಾವಣೆಯಲ್ಲಿ ಬಹುತೇಕರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ‌. ಮತ್ತೆ ಸೀಲ್‌ಡೌನ್ ಮಾಡಿದರೆ ಜೀವನ ನಡೆಸುವುದೇ ಕಷ್ಟವಾಗುತ್ತದೆ. ಬೇಕಿದ್ದರೆ ಸೋಂಕಿತರ ಮನೆಯನ್ನು ಮಾತ್ರ ಸೀಲ್‌ಡೌನ್ ಮಾಡಿ ಎಂದು ಇಲ್ಲಿನ ಜನರು ಒತ್ತಾಯಿಸಿದ್ದಾರೆ.

ABOUT THE AUTHOR

...view details