ಕರ್ನಾಟಕ

karnataka

ETV Bharat / state

8 ವರ್ಷದ ಮಗನಿಗೆ ತಂದೆಯಿಂದಲೇ ದೈಹಿಕ ಹಿಂಸೆ: ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು - physical violence on his 8 year old child

ಮದ್ಯವ್ಯಸನಿಯಾಗಿದ್ದ ತಂದೆ ತನ್ನ 8 ವರ್ಷದ ಮಗನ ಮೇಲೆ ಪ್ರತಿನಿತ್ಯ ಹಲ್ಲೆ ನಡೆಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕ್ರಮ ಕೈಗೊಂಡಿದ್ದಾರೆ.

Locals accused father to physical violence on his 8 year old child
8 ವರ್ಷದ ಮಗನಿಗೆ ತಂದೆಯಿಂದಲೇ ದೈಹಿಕ ಹಿಂಸೆ ಆರೋಪ

By

Published : Sep 23, 2020, 1:42 PM IST

ಶನಿವಾರಸಂತೆ(ಕೊಡಗು): 8 ವರ್ಷದ ಮಗನಿಗೆ ತಂದೆಯೇ ದೈಹಿಕ ಹಿಂಸೆ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ. ಮದ್ಯವ್ಯಸನಿಯಾಗಿರುವ ತಂದೆ ಮಗನಿಗೆ ಮನೆಯಲ್ಲಿ ಕೆಲಸ ಮಾಡುವಂತೆ ದೈಹಿಕ ಹಿಂಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.

8 ವರ್ಷದ ಮಗುನಿಗೆ ತಂದೆಯಿಂದಲೇ ದೈಹಿಕ ಹಿಂಸೆ ಆರೋಪ

ಈ ಹಿನ್ನೆಲೆ ಸ್ಥಳೀಯರು ಮಗುವನ್ನು ರಕ್ಷಿಸುವಂತೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದೀಗ ಸ್ಥಳಕ್ಕಾಗಮಿಸಿರುವ ಶನಿವಾರಸಂತೆ ಪೊಲೀಸರು ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಪ್ರತಿನಿತ್ಯ ಮಗನಿಗೆ ಹಿಂಸೆ ನೀಡುತ್ತಿದ್ದ ತಂದೆ

9 ವರ್ಷದ ಹಿಂದೆ ವಿವಾಹವಾಗಿದ್ದ ಚಂದ್ರಶೇಖರ್​​ಗೆ ಇಬ್ಬರು ಹೆಣ್ಣು ಮಕ್ಕಳು ಓರ್ವ ಮಗನಿದ್ದಾನೆ. ಮದ್ಯ ವ್ಯಸನಿಯ ಕಾಟ ತಾಳಲಾರದೇ ಮಕ್ಕಳೊಂದಿಗೆ ಪತ್ನಿ ತವರು ಮನೆಗೆ ತೆರಳಿದ್ದಾಳೆ. ಬಳಿಕ ಚಂದ್ರಶೇಖರ್ ಮಗನನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಮನೆಯಲ್ಲಿ ಮಗನಿಗೆ ವಯಸ್ಸಿಗೂ ಮೀರಿದ ಕೆಲಸ ನೀಡುತ್ತಿದ್ದು, ಮಾಡದಿದ್ದರೆ ಹಲ್ಲೆ ಮಾಡುತ್ತಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ABOUT THE AUTHOR

...view details