ಕೊಡಗು: ಹುಣಸೂರಿನಿಂದ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ 1.20 ರೂ ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಗೋಣಿಕೊಪ್ಪಲು ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ತರಕಾರಿ ಗೂಡ್ಸ್ ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ - ಹುಣಸೂರಿನಲ್ಲಿ ಅಕ್ರಮ ಮದ್ಯ ವಶ
ತರಕಾರಿ ಗೂಡ್ಸ್ ವಾಹನದಲ್ಲಿ ಹುಣಸೂರಿನಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 1.20 ರೂ ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
![ತರಕಾರಿ ಗೂಡ್ಸ್ ವಾಹನದಲ್ಲಿ ಕೇರಳಕ್ಕೆ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ liquor](https://etvbharatimages.akamaized.net/etvbharat/prod-images/768-512-05:44:42:1621253682-kn-mdk-17052021174321-1705f-1621253601-112.jpg)
ತರಕಾರಿ ಗೂಡ್ಸ್ ವಾಹನದಲ್ಲಿ ಅಕ್ರಮ ಮದ್ಯ ಸಾಗಾಟವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಿಂಚಿನ ಕಾರ್ಯಾಚರಣೆ ಮೂಲಕ ಆರೋಪಿಗಳು ಮತ್ತು ವಾಹನ ಸುಮಾರು ರೂ.1.20 ಲಕ್ಷ ಮೌಲ್ಯದ ಓಲ್ಡ್ ಅಡ್ಮಿರಲ್ ಮತ್ತು ಬಿಜಾಯ್ಸ್ ಫುಲ್ ಬಾಟಲ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ದಿನನಿತ್ಯ ಹುಣಸೂರಿನಿಂದ ಕೇರಳಕ್ಕೆ ತರಕಾರಿ ಸಾಗಾಟ ಮಾಡುತ್ತಿದ್ದ ವಾಹನದಲ್ಲಿ ಭಾರಿ ಮೌಲ್ಯದ ಮದ್ಯವನ್ನು ಆನೆಚೌಕೂರು ಗೇಟ್ನಲ್ಲಿ ಪೊಲೀಸರು ತಪಾಸಣೆ ನಡೆಸಿ ವಶಪಡಿಸಿಕೊಂಡರು. ವಿರಾಜಪೇಟೆ ಡಿವೈಎಸ್ ಪಿ ಜಯಕುಮಾರ್ ನಿರ್ದೇಶನದ ಮೇರೆಗೆ ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್ ಹಾಗೂ ಪೊಲೀಸ್ ಉಪ ನಿರೀಕ್ಷಕ ಹೆಚ್.ಸುಬ್ಬಯ್ಯ ಮತ್ತು ಸಿಬ್ಬಂದಿ ಮಿಂಚಿನ ಕಾರ್ಯಾಚರಣೆ ನಡೆಸಿ ವಾಹನ ಸಹಿತ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.