ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ಆತಂಕ: ಮದ್ಯ ಸಂಗ್ರಹಿಸಲು ಮುಂದಾದ ಪಾನ ಪ್ರಿಯರು..!

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಷಯ ಮುನ್ನೆಲೆಗೆ ಬಂದಿರುವುದರಿಂದ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮದ್ಯ ಪ್ರಿಯರು, ತಮ್ಮ ಇಷ್ಟದ ಬ್ರಾಂಡ್‌ಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.

Liquor lovers go out to collect liquor in madikeri
ಲಾಕ್‌ಡೌನ್ ಆತಂಕ: ಮದ್ಯ ಸಂಗ್ರಹಿಸಲು ಮುಂದಾದ ಪಾನ ಪ್ರಿಯರು..!

By

Published : Jul 13, 2020, 4:48 PM IST

ಕೊಡಗು: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ವಿಷಯ ಮುನ್ನೆಲೆಗೆ ಬಂದಿರುವುದರಿಂದ ಜಿಲ್ಲೆಯ ಮಡಿಕೇರಿಯಲ್ಲಿ ಮದ್ಯ ಪ್ರಿಯರು ತಮ್ಮ ಇಷ್ಟದ ಬ್ರಾಂಡ್‌ಗಳನ್ನು ಖರೀದಿಸುತ್ತಿದ್ದಾರೆ.

ಲಾಕ್‌ಡೌನ್ ಆತಂಕ: ಮದ್ಯ ಸಂಗ್ರಹಿಸಲು ಮುಂದಾದ ಪಾನ ಪ್ರಿಯರು..!

ಒಂದು ವೇಳೆ ರಾಜ್ಯ ಅಥವಾ ಆಯ್ದ ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಸಿದರೆ ಮುಂದೇನು ಎಂಬ ಆತಂಕದಿಂದ ಒಂದು ವಾರಕ್ಕೆ ಆಗುವಷ್ಟು ತಮ್ಮಿಷ್ಟದ ಬ್ರಾಂಡ್‌ಗಳನ್ನು ಕೆಲವರು ಖರೀದಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಾರ್​ ಸಿಬ್ಬಂದಿ, ವಾರದಿಂದ ಅಷ್ಟೇನು ವ್ಯಾಪಾರ ಇರಲಿಲ್ಲ. ಬೆಂಗಳೂರಿನಲ್ಲಿ ಸಿಎಂ ತೆಗೆದುಕೊಂಡ ನಿರ್ಧಾರದ ಬಳಿಕ ವ್ಯಾಪಾರ ಬಿರುಸಾಗಿದೆ. ಒಂದು ಲಕ್ಷ ವ್ಯಾಪಾರಕ್ಕೆ ಸಂಜೆಯವರೆಗೂ ಕಾಯುತ್ತಿದ್ದೆವು. ಆದರೆ, ಇವತ್ತು ಮಧ್ಯಾಹ್ನದ ವೇಳೆಗಾಗಲೇ ಲಕ್ಷ ವ್ಯಾಪಾರವಾಗಿದೆ ಎಂದರು.

ರಾಜ್ಯದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಈಗಾಗಲೇ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಮಾಡಿ ಸರ್ಕಾರ ಆದೇಶಿಸಿದೆ.

ಕೊರೊನಾ ಪಾಸಿಟಿವ್ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಸುವಂತೆ ಜನತೆ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳೂ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಲಾಕ್‌ಡೌನ್ ಅಗತ್ಯವಿದೆಯೋ ಅಥವಾ ಬೇಡವೋ ಎನ್ನುವ ಬಗ್ಗೆ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಕೊಡಗಿನಲ್ಲೂ ಕೊರೊನಾ ಪ್ರಕರಣಗಳು ಹರಡುತ್ತಿವೆ. ಬಹುಶಃ ಲಾಕ್‌ಡೌನ್ ಮಾಡಬಹುದುದೇನೊ ಎಂಬ ಮುಂದಾಲೋಚನೆಯಿಂದ ಮದ್ಯ ಪ್ರಿಯರು ಮದ್ಯ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ.

ABOUT THE AUTHOR

...view details