ಮಡಿಕೇರಿ: ಅರಣ್ಯಾಧಿಕಾರಿ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಚೆಟ್ಟಳ್ಳಿ ತೋಟದಲ್ಲಿ ನಡೆದಿದೆ.
ರಕ್ಷಣೆಗೆ ಬಂದ ಅರಣ್ಯಾಧಿಕಾರಿ ಮೇಲೆಯೇ ಚಿರತೆ ದಾಳಿ - ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳಿ ತೋಟದಲ್ಲಿ ಉಪವಲಯ ಅರಣ್ಯಾಧಿಕಾರಿ ಮೇಲೆ ಚಿರತೆ ದಾಳಿ
ಕಾಫೀ ತೋಟದಲ್ಲಿ ಉರುಳಿಗೆ ಸಿಲುಕಿದ್ದ ಚಿರತೆ ರಕ್ಷಣೆ ವೇಳೆ ಅದು ಗಾಬರಿಗೊಂಡು ಸೋಮವಾರಪೇಟೆಯ ಉಪವಲಯ ಅರಣ್ಯಾಧಿಕಾರಿ ರಂಜನ್ ಮೇಲೆ ದಾಳಿ ನಡೆಸಿದೆ.

ಅರಣ್ಯಾಧಿಕಾರಿ ಚಿರತೆ ಮೇಲೆ ದಾಳಿ
ಅರಣ್ಯಾಧಿಕಾರಿ ಮೇಲೆ ಚಿರತೆ ದಾಳಿ
ಸೋಮವಾರಪೇಟೆ ಉಪವಲಯ ಅರಣ್ಯಾಧಿಕಾರಿ ರಂಜನ್ ಕಾಫೀ ತೋಟದಲ್ಲಿ ಉರುಳಿಗೆ ಸಿಲುಕಿದ ಚಿರತೆಯನ್ನು ಉರುಳಿನಿಂದ ಬಿಡಿಸುವಾಗ ಈ ಘಟನೆ ನಡೆದಿದೆ. ಬೆಳಗ್ಗೆ ಸುಮಾರು 8 ಗಂಟೆಯ ಸಮಯದಲ್ಲಿ ಉರುಳಿಗೆ ಸಿಲುಕಿದ ಚಿರತೆ ರಕ್ಷಿಸುವಾಗ ಗಾಬರಿಗೊಂಡು ಅದಿಕಾರಿ ಮೇಲೆರೆಗಿದೆ.
ಚಿರತೆ ದಾಳಿಯಿಂದ ಉಪ ವಲಯ ಅಧಿಕಾರಿ ರಂಜನ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಚೆಟ್ಟಳಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವ ಸಾಧ್ಯತೆಗಳಿವೆ.