ತಲಕಾವೇರಿ(ಕೊಡಗು):ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬಗಳು ಕಣ್ಮರೆಯಾಗಿರುವ ಪ್ರದೇಶಕ್ಕೆ ರಕ್ಷಣಾ ತಂಡಗಳು ಧಾವಿಸಿದೆ. ಆದರೆ, ಕಾರ್ಯಾಚರಣೆಗೆ ಮಳೆ, ಮಂಜು ಅಡ್ಡಿಯಾಗಿದೆ.
ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬ ಕಣ್ಮರೆ: ಕಾರ್ಯಾಚರಣೆಗೆ ತೊಡಕಾದ ಮಳೆ, ಮಂಜು - ಗುಡ್ಡ ಕುಸಿದು ಅರ್ಚಕ ಕುಟುಂಬ ಕಣ್ಮರೆ
ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬಗಳು ಕಣ್ಮರೆಯಾದ ಪ್ರದೇಶಕ್ಕೆ ರಕ್ಷಣಾ ತಂಡಗಳು ಧಾವಿಸಿದೆ. ಆದರೆ, ಕಾರ್ಯಾಚರಣೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಮಂಜು ಅಡ್ಡಿಯಾಗಿದೆ.
ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬ ಕಣ್ಮರೆ
ಘಟನೆ ನಡೆದ ಸ್ಥಳಕ್ಕೆ ತೆರಳುವ ದಾರಿ ಮಧ್ಯೆ ಹಲವೆಡೆ ಗುಡ್ಡ ಕುಸಿತ ಸಂಭವಿಸಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ, ದುರಂತ ಸಂಭವಿಸಿದ ಪ್ರದೇಶದಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಲು ಜೆಸಿಬಿ ಯಂತ್ರಗಳ ಅವಶ್ಯಕತೆಯಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಗೆ ಯಂತ್ರಗಳು ತಲುಪುವುದು ಅಸಾಧ್ಯವಾಗಿದೆ.
ಜೊತೆಗೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಂಜು ಮುಸುಕಿದ ವಾತಾವರಣವಿದೆ. ಇನ್ನು ಎಕರೆಗಟ್ಟಲೇ ಪ್ರದೇಶದಲ್ಲಿ ಗುಡ್ಡ ಸಂಭವಿಸಿರುವುದರಿಂದ ತೆರವುಗೊಳಿಸಲು ಹೆಚ್ಚಿನ ಕಾಲಾವಕಾಶ ಬೇಕಾಗಿದೆ.