ಕೊಡಗು:ಮಳೆ ಪರಿಣಾಮ ಮಡಿಕೇರಿ ರಾಜಾಸೀಟ್ ರಸ್ತೆಯ ಆಕಾಶವಾಣಿ ಟವರ್ ಬಳಿ ಬರೆ ಕುಸಿದಿದ್ದು, ಕೆಲಸ ಮಾಡುತ್ತಿದ್ದ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿಯಲ್ಲಿ ಬರೆ ಕುಸಿತ: ಅನಾಹುತದಿಂದ ಪಾರಾದ ಕೂಲಿ ಕಾರ್ಮಿಕರು - ಮಣ್ಣು ಕುಸಿತ
ಮಡಿಕೇರಿ ರಾಜಾಸೀಟ್ ರಸ್ತೆಯ ಆಕಾಶವಾಣಿ ಟವರ್ ಬಳಿ ಮಣ್ಣು ಕುಸಿದಿದ್ದು, ಟವರ್‌ಗೆ ಹಾನಿ ಉಂಟಾಗದಂತೆ ತಡೆಗೋಡೆ ನಿರ್ಮಿಸುತ್ತಿದ್ದ ಕಾರ್ಮಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬರೆ ಕುಸಿತ ಅನಾಹುತದಿಂದ ಪಾರಾದ ಕೂಲಿ ಕಾರ್ಮಿಕರು
2018ರಲ್ಲಿ ಅಲ್ಪ ಪ್ರಮಾಣದ ಬರೆ ಕುಸಿದಿದ್ದ ಜಾಗದಲ್ಲೇ ಮತ್ತೆ ಮಣ್ಣು ಕುಸಿದಿದೆ. ಮಳೆಯಿಂದ ಅಲ್ಲಿನ ಟವರ್‌ಗೆ ಹಾನಿ ಉಂಟಾಗದಂತೆ ಏಳು ಮಂದಿ ಸ್ಥಳೀಯ ಕಾರ್ಮಿಕರು ತಡೆಗೋಡೆ ನಿರ್ಮಿಸುತ್ತಿದ್ದರು.
ಬರೆ ಜರಿದ ಸ್ಥಳದಲ್ಲೇ ನಿತ್ಯ ಊಟ ಮಾಡುತ್ತಿದ್ದ ಕಾರ್ಮಿಕರು, ಮಧ್ಯಾಹ್ನ ಊಟ ಮುಗಿಸಿ ಸಾರುವೆ ನಿರ್ಮಿಸಿಕೊಳ್ಳಲು ಮರಗಳನ್ನು ಇಳಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಸಡಿಲಗೊಂಡ ಮಣ್ಣು ಜರಿದಿದೆ.