ಪಾಳುಬಿದ್ದ ಕೆರೆಗೆ ಮರು ಜೀವ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೆರೆಗೆ ಬೇಕಿದೆ ತಡೆಗೋಡೆ..! - ಕೆರೆಗೆ ಮರುಜೀವ
ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಕೊಡಗಿನ ಸಾರ್ವಜನಿಕ ಕೆರೆಯೊಂದಕ್ಕೆ ಮರುಜೀವ ಬಂದಿದೆ. ನರೇಗಾ ಯೋಜನೆಯಡಿ ಯುವಕರ ತಂಡ ಕೆರೆಯಲ್ಲಿನ ಹೂಳು ತೆಗೆದು ಅಭಿವೃದ್ಧಿಪಡಿಸಿದ್ದಾರೆ.
ಸಿದ್ಧಾಪುರ (ಕೊಡಗು): ಹಲವು ವರ್ಷಗಳಿಂದ ಹೂಳು ತುಂಬಿ, ಪಾಳು ಬಿದ್ದಿದ್ದ ಕೊಡಗಿನನ ಸಿದ್ಧಾಪುರದ ಬಳಿಯಿರುವ ಅಭ್ಯತ್ ಮಂಗಲ ಸಾರ್ವಜನಿಕ ಕೆರೆಗೆ ಮರುಜೀವ ಬಂದಿದೆ. ನರೇಗಾ ಯೋಜನೆಯಡಿ ಯುವಕರ ತಂಡ ಕೆರೆಯಲ್ಲಿನ ಹೂಳು ತೆಗೆದು ಅಭಿವೃದ್ಧಿಪಡಿಸಿದೆ.
ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‍ಮಂಗಲ ಗ್ರಾಮದ ಅತ್ತಿಮಂಗಲ ಕೆರೆ ಕಳೆದ ಹಲವು ವರ್ಷಗಳಿಂದ ಹೂಳು ತುಂಬಿತ್ತು. ಗಿಡಗಳು ಬೆಳೆದು ಪಾಳು ಬಿದ್ದಿತ್ತು. ಇಷ್ಟು ಮಾತ್ರವಲ್ಲದೇ ಕೆಲವರು ರಾತ್ರಿ ವೇಳೆ ಕೋಳಿ ಮಾಂಸದ ತ್ಯಾಜ್ಯವನ್ನು ಕೆರೆಯ ಬದಿಯಲ್ಲಿ ಎಸೆಯುತ್ತಿದ್ದು, ದುರ್ವಾಸನೆಯಿಂದ ಕೂಡಿತ್ತು. ಇದನ್ನು ಅರಿತ ನೆಲ್ಯಹುದಿಕೇರಿಯ ಮುತ್ತಪ್ಪ ಯುವಕಲಾ ಸಂಘದ ಯುವಕರ ತಂಡ ಕೆರೆಯ ಪುನಶ್ಚೇತನಕ್ಕೆ ಮುಂದಾಗಿದ್ದು, ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆ ಅಡಿ ಕೆರೆ ಅಭಿವೃದ್ಧಿಗೆ ಅನುವು ಮಾಡಿಕೊಡಲಾಗಿದೆ.