ಕರ್ನಾಟಕ

karnataka

ETV Bharat / state

ಭಾನುವಾರ ಮೃತಪಟ್ಟಿದ್ದ ವ್ಯಕ್ತಿಗೆ ಕೊರೊನಾ: ಕುಶಾಲನಗರದ ಖಾಸಗಿ ಆಸ್ಪತ್ರೆ ಸೀಲ್ ​ಡೌನ್ - ಕೊಡಗು ಜಿಲ್ಲೆ ಕುಶಾಲನಗರ

ಕೊಡಗು ಜಿಲ್ಲೆಯ ಕುಶಾಲನಗರದ 58 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಕೋವಿಡ್ ಆಸ್ಪತ್ರೆಗೆ ದಾಖಲಾದ ಅರ್ಧ ಗಂಟೆಯಲ್ಲೇ ಮೃತಪಟ್ಟಿದ್ದು, ಆತ ವಾಸವಿದ್ದ ದಂಡಿನಪೇಟೆ ಏರಿಯಾ ಹಾಗೂ ಕುಶಾಲನಗರ ಖಾಸಗಿ ಆಸ್ಪತ್ರೆಯನ್ನ ಸೀಲ್ ​ಡೌನ್​ ಮಾಡಲಾಗಿದೆ.

Kushalanagar Private Hospital Seal Down
ಭಾನುವಾರ ಮೃತಪಟ್ಟಿದ್ದ ವ್ಯಕ್ತಿಗೆ ಕೊರೊನಾ ಸೋಂಕು..ಕುಶಾಲನಗರ ಖಾಸಗಿ ಆಸ್ಪತ್ರೆ ಸೀಲ್​ಡೌನ್

By

Published : Jul 6, 2020, 9:23 PM IST

ಕೊಡಗು: ಭಾನುವಾರ ಮೃತಪಟ್ಟಿದ್ದ 58 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಆತ ವಾಸವಿದ್ದ ದಂಡಿನಪೇಟೆ ಏರಿಯಾ ಹಾಗೂ ಕುಶಾಲನಗರ ಖಾಸಗಿ ಆಸ್ಪತ್ರೆಯನ್ನ ಸೀಲ್​ ಡೌನ್​ ಮಾಡಲಾಗಿದೆ.

ಭಾನುವಾರ ಮೃತಪಟ್ಟಿದ್ದ ವ್ಯಕ್ತಿಗೆ ಕೊರೊನಾ: ಕುಶಾಲನಗರ ಖಾಸಗಿ ಆಸ್ಪತ್ರೆ ಸೀಲ್ ​ಡೌನ್

ಕುಶಾಲನಗರದ 58 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ ಆಸ್ಪತ್ರೆಗೆ ದಾಖಲಾದ ಅರ್ಧ ಗಂಟೆಯಲ್ಲೇ ಮೃತಪಟ್ಟಿದ್ದು, ಕೋವಿಡ್ ಆಸ್ಪತ್ರೆಗೆ ಬರುವ ಮುನ್ನಾ ಕುಶಾಲನಗರದ ಖಾಸಗಿ ಆಸ್ಪತ್ರೆಯಲ್ಲಿ ಆರೇಳು ದಿನಗಳಿಂದ ಚಿಕಿತ್ಸೆ ಪಡೆದಿದ್ದರು. ಉಸಿರಾಟದ ತೊಂದರೆ ತೀವ್ರವಾಗಿದ್ದರಿಂದ ಕೋವಿಡ್ ಆಸ್ಪತ್ರೆಗೆ ಬಂದಿದ್ದರು. ಹೀಗಾಗಿ ಕುಶಾಲನಗರದ ಖಾಸಗಿ ಆಸ್ಪತ್ರೆಯನ್ನ ಸೀಲ್ ಡೌನ್ ಮಾಡಿ, ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆ ವೈದ್ಯರನ್ನ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಮೃತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನ ಕ್ವಾರಂಟೈನ್ ಮಾಡಲಾಗಿದ್ದು, ಸದ್ಯ ಯಾರಿಗೂ ರೋಗ ಲಕ್ಷಣಗಳು ಇನ್ನೂ ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details