ಮಡಿಕೇರಿ(ಕೊಡಗು): ಜಿಲ್ಲಾಡಳಿತ ಒಂದು ತಿಂಗಳಲ್ಲಿ ವಿದೇಶಗಳಿಗೆ ಹೋಗಿ ಬಂದಿರುವ 65 ಜನರನ್ನು ಪತ್ತೆ ಹಚ್ಚಿದ್ದು, ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.
ತಿಂಗಳಲ್ಲಿ 65 ಜನರು ಕೊಡಗಿನಿಂದ ವಿದೇಶಗಳಿಗೆ ಭೇಟಿ: ಓರ್ವನಿಗೆ ಕೊರೊನಾ ಶಂಕೆ - corona virus in kodagu district
ಒಂದು ತಿಂಗಳಲ್ಲಿ ವಿದೇಶಗಳಿಗೆ ಹೋಗಿ ಬಂದಿರುವ 65 ಜನರನ್ನು ಕೊಡಗು ಜಿಲ್ಲಾಡಳಿತ ಪತ್ತೆ ಹಚ್ಚಿದ್ದು 64 ಜನರ ಮೇಲೆ ನಿಗಾ ಇರಿಸಿದೆ. ಕೊರೊನಾ ಶಂಕೆ ಹಿನ್ನೆಲೆ ಓರ್ವ ವ್ಯಕ್ತಿಗೆ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಡಗು ಜಿಲ್ಲಾಡಳಿತ
ಮಡಿಕೇರಿಯಲ್ಲಿ 32, ವಿರಾಜಪೇಟೆ ತಾಲೂಕಿನಲ್ಲಿ 23 ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ 11 ಸೇರಿದಂತೆ ತಿಂಗಳ ಹಿಂದಷ್ಟೇ ವಿವಿಧ ದೇಶಗಳಿಂದ ಬಂದಿರುವ ಒಟ್ಟು 65 ಜನರನ್ನು ಗುರುತಿಸಿದೆ. ಇವರಲ್ಲಿ 64 ಜನರ ಮೇಲೆ ಮನೆಯಲ್ಲೇ ನಿಗಾ ಇರಿಸಲಾಗಿದೆ.
ಒಬ್ಬರಿಗೆ ಮಾತ್ರ ಕೊರೊನಾ ವೈರಸ್ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರೆಸಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಿದೆ. ಅಲ್ಲದೆ 64 ಜನರಿಗೆ ಮನೆಯಿಂದ ಹೊರ ಹೋಗದಂತೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಲಹೆ ನೀಡಿದ್ದಾರೆ.
Last Updated : Mar 15, 2020, 10:16 AM IST