ಕೊಡಗು:ಮಹಿಳೆಯರ ಉಡುಪು ಧರಿಸಿ, ದೇವರಿಗೆ ಕೆಟ್ಟದಾಗಿ ಬೈಯುತ್ತ, ಬೀದಿಯಲ್ಲಿ ಭೀಕ್ಷೆ ಬೇಡುತ್ತ, ನೃತ್ಯ ಮಾಡುತ್ತಿರುವ ವೇಷದಾರಿಗಳು, ಕಾಡಿನಲ್ಲಿ ಸಿಗುವ ಪರಿಕರಗಳನ್ನು ಹಿಡಿದು ಬೈಗುಳದ ಮಳೆ ಸುರಿಸುತ್ತಾ ದೇವರಿಗೆ ಹರಕೆ ತೀರಿಸುವ ವಿಶೇಷ ಹಬ್ಬವೊಂದು ಜಿಲ್ಲೆಯಲ್ಲಿ ನಡೆಯುತ್ತದೆ.
ಕೊಡಗಿನಲ್ಲಿ ಕುಂಡೆ ಹಬ್ಬ ಸಂಭ್ರಮ ಕೊಡಗಿನ ಬುಡಕಟ್ಟು ಜನಾಂಗದವರು ಚಿತ್ರ - ವಿಚಿತ್ರ ವೇಷ ಧರಿಸಿ, ಎರಡು ದಿನ ಬಾಯಿಗೆ ಬಂದಂತೆ ಬೈಯ್ಯುತ್ತಾ.. ರಸ್ತೆಗಳಲ್ಲಿ ಕುಣಿಯುತ್ತಾ.. ಈ ವಿಶಿಷ್ಟ ಹಬ್ಬ ಆಚರಿಸುತ್ತಾರೆ. ನಂತರ ಗೋಣಿಕೊಪ್ಪದ ದೇವರಪುರದ ಅಯ್ಯಪ್ಪ ದೇವಾಲಯದ ಮೈದಾನದಲ್ಲಿ ಸೇರಿ ಬೈಯ್ದಿದ್ದಕ್ಕೆ ದೇವರಲ್ಲಿ ಕ್ಷಮೆ ಕೇಳಿ ಹಬ್ಬವನ್ನು ಆಚರಿಸುವುದು ಇಲ್ಲಿನ ವಾಡಿಕೆಯಾಗಿದೆ.
ಕೊಡಗಿನಲ್ಲಿ ಕುಂಡೆ ಹಬ್ಬ ಸಂಭ್ರಮ ಕುಂಡೆ... ಕುಂಡೇ... ಕುಂಡೇ ನೋಡ.. ಅವಳ ಅಂದ ನೋಡ... ಲಕ್ಸ್ ಸೋಪು ನೋಡ.. ಬಿಳಿ ಕುಂಡೇ.. ಹೀಗೆ ಬಾಯಿಗೆ ಬರುವ ಅಶ್ಲೀಲ ಶಬ್ದಗಳನ್ನು ಖುಷಿ-ಖುಷಿಯಾಗಿ ಆನಂದಿಸುವುದೇ ಕುಂಡೆ ಹಬ್ಬದ ಭಾಗವಾಗಿದೆ. ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ರದ್ದಾಗಿದ್ದ ಕುಂಡೇ ಹಬ್ಬವನ್ನು ಕೊಡಗಿನ ಜನತೆ ಸಂಭ್ರಮಿಸಿದರು. ಈ ವರ್ಷ ಮೇ 25, 26ರಂದು ಕುಂಡೆ ಹಬ್ಬ ಆಚರಿಸಿದರು.
ಕೊಡಗಿನಲ್ಲಿ ಕುಂಡೆ ಹಬ್ಬ ಸಂಭ್ರಮ ಓದಿ:ಯುಗಾದಿ ಹಬ್ಬದಂದು ಮುಜರಾಯಿ ದೇವಾಲಯಗಳಲ್ಲಿ 'ಧಾರ್ಮಿಕ ದಿನಾಚರಣೆ'ಗೆ ಸೂಚನೆ
ಕುಂಡೆ ಹಬ್ಬ ಕೊಡಗಿನ ಬುಡಕಟ್ಟು ಜನಾಂಗದವರ ಹಬ್ಬ. ಹಬ್ಬದ ದಿನದಂದು ಕಂಠಪೂರ್ತಿ ಕುಡಿದು ಚಿತ್ರ-ವಿಚಿತ್ರ ವೇಷಗಳನ್ನು ತೊಟ್ಟು ದಾರಿಯಲ್ಲಿ ಕಂಡವರೆನ್ನೆಲ್ಲಾ ಮುಲಾಜಿಲ್ಲದೇ ಅಶ್ಲೀಲ ಪದಗಳಿಂದ ಬೈಯ್ಯುತ್ತಾರೆ. ಅವರು ಬೈಯ್ಯುತ್ತಿದ್ದರೂ ಯಾರು ಏನೂ ಹೇಳುವುದಿಲ್ಲ. ಜೊತೆಗೆ ಅವರಿಗೆ ಸ್ವಲ್ಪ ಹಣ ನೀಡಿ ಆ ಬೈಗುಳವನ್ನು ಕೇಳಿ ಖುಷಿ ಪಡುತ್ತಾರೆ. ಅದುವೇ ವಿಶೇಷ. ಅಶ್ಲೀಲವಾಗಿ ಬೈಯ್ಯುವುದಕ್ಕೂ ಒಂದು ಹಬ್ಬವಿದೆಯೇ ಎಂದರೆ ಹೊರಗಿನವರಿಗೆ ಆಶ್ಚರ್ಯವಾದರೂ ಇದು ದೇವರಿಗೆ ಹರಕೆ ತೀರಿಸುವ ಹಬ್ಬವಾಗಿದೆ.
ಕೊಡಗಿನಲ್ಲಿ ಕುಂಡೆ ಹಬ್ಬ ಸಂಭ್ರಮ ಹಬ್ಬದಲ್ಲಿ ಪುರುಷರು ಮಹಿಳೆಯರ ಒಳ ಉಡುಪು ಧರಿಸಿ ಅಥವಾ ಸ್ತ್ರೀಯಂತೆ ಕಾಣುವಂತೆ ವೇಷಗಳನ್ನು ತೊಟ್ಟು ಮೈಗೆಲ್ಲಾ ಬಣ್ಣ ಬಳಿದು, ಹಳೆಯ ಡ್ರಮ್ ಅಥವಾ ಟಿನ್ ಬಡೆದು ಭೀಕ್ಷೆ ಬೇಡುತ್ತಾರೆ. ಈ ಹಬ್ಬದಲ್ಲಿ ಭದ್ರಕಾಳಿಯನ್ನು ಪೂಜಿಸಲಾಗುವುದು. ಕಷ್ಟಗಳು ಬಂದರೆ ಈ ದೇವರ ಹತ್ತಿರ ಬಂದು ಹರಕೆ ಕಟ್ಟಿಕೊಂಡ್ರೆ ಒಳೆಯದಾಗುತ್ತೆ ಎಂಬ ಪ್ರತೀತಿ ಇದೇ. ಈ ಕಾರಣಕ್ಕಾಗಿ ಈ ರೀತಿ ವೇಷ ಧರಿಸಿ ಹರಕೆ ತೀರಿಸುತ್ತಾರೆ.
ಕೊಡಗಿನಲ್ಲಿ ಕುಂಡೆ ಹಬ್ಬ ಸಂಭ್ರಮ ದೇವಾಲಯದ ಭದ್ರಕಾಳಿ ಉತ್ಸವ ಮೂರ್ತಿಯನ್ನು ಮರದ ಕುದುರೆಯ ಮೂಲಕ ಅಯ್ಯಪ್ಪ ದೇವಾಲಯಕ್ಕೆ ಕರೆತಂದು ಪೂಜಾ ಕೈಂಕರ್ಯ ನೆರವೇರಿಸಲಾಗುವುದು. ಭೀಕ್ಷೆ ಬೇಡಿದ ಹಣವನ್ನು ಬಂಡಾರಕ್ಕೆ ಹಾಕುತ್ತಾರೆ. ಹರಕೆಹೊತ್ತು ಬಂದಿರುವ ಜನರು ಕೀಲು ಕುದುರೆಯ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಎರಡು ದಿನ ಬಾಯಿಗೆ ಬಂದಂತೆ ಬೈಯ್ದು ನಂತರ ಭದ್ರಕಾಳಿ ದೇವಾಲಯಕ್ಕೆ ಬಂದು ದೇವಿ ಬಳಿ ಬೈಯ್ದಿದ್ದಕ್ಕೆ ತಪ್ಪಾಯ್ತು ಎಂದು ಕೇಳಿಕೊಳ್ಳುವುದರೊಂದಿಗೆ ಹಬ್ಬವು ಮುಕ್ತಾಯವಾಗುತ್ತದೆ.