ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್‌ಗೆ ಕೊಡವ ಸಮಾಜದಿಂದ ಉಚಿತ ಅನ್ನ ದಾಸೋಹ! - meals Distribute to Corona Warriors

ಕೊಡವ ಸಮಾಜದ ವತಿಯಿಂದ ಕೊರೊನಾ ‌ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಏಪ್ರಿಲ್ 16ರಿಂದ ಉಚಿತವಾಗಿ ಅನ್ನದಾನ ಮಾಡಲಾಗುತ್ತಿದೆ.

meals Distribute  to Corona Warriors
ಕೊರೊನಾ ವಾರಿಯರ್ಸ್‌ಗಳಿಗೆ ಕೊಡವ ಸಮಾಜದಿಂದ ಉಚಿತ ಅನ್ನದಾಸೋಹ

By

Published : Apr 28, 2020, 5:11 PM IST

ಕೊಡಗು: ಕೊರೊನಾ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಪೌರಕಾರ್ಮಿಕರು ಸೇರಿದಂತೆ ಸರ್ಕಾರಿ ನೌಕರರಿಗೆ ಕೊಡವ ಸಮಾಜದಿಂದ ಉಚಿತವಾಗಿ ಅನ್ನ ದಾಸೋಹ ಮಾಡಲಾಗುತ್ತಿದೆ.

ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ


ಈ ಬಗ್ಗೆ ಮಾತನಾಡಿದ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ, ಪಟ್ಟಣದ ಕೊಡವ ಸಮಾಜದ ವತಿಯಿಂದ ಕೊರೊನಾ ‌ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಏಪ್ರಿಲ್ 16ರಿಂದ ಉಚಿತವಾಗಿ ಅನ್ನದಾನ ಮಾಡುತ್ತಿದ್ದೇವೆ. ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಕೆಇಬಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸೇರಿದಂತೆ ಸರ್ಕಾರಿ ನೌಕರರಿಗೆ ಕೊಡವ ಸಮಾಜದಿಂದ ಊಟದ ವ್ಯವಸ್ಥೆ ಮಾಡಿದ್ದೇವೆ. ಪ್ರತಿನಿತ್ಯ ಸುಮಾರು 400 ಮಂದಿ ಊಟ ಮಾಡುತ್ತಿದ್ದಾರೆ. ಇದುವರೆಗೂ 5 ಸಾವಿರ ಜನರಿಗೆ ಅನ್ನದಾನ ಮಾಡಿದ್ದು, ದಿನಕ್ಕೆ 40 ಸಾವಿರ ಖರ್ಚಾಗುತ್ತಿದೆ ಎಂದರು.

ABOUT THE AUTHOR

...view details