ಕೊಡಗು:ಜಿಲ್ಲೆಯಾದ್ಯಂತ ಕೈಲ್ ಮುಹೂರ್ತ ಹಬ್ಬದ ಸಡಗರ ಮನೆ ಮಾಡಿದೆ. ಕೃಷಿ ಚಟುವಟಿಕೆ ಮುಗಿಸಿದ ರೈತರು ಖುಷಿ ಖುಷಿಯಾಗಿ ಉತ್ತಮ ಬೆಳೆ ನಿರೀಕ್ಷೆಯಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಮಳೆಯ ನಡುವೆ ಕೃಷಿಗೆ ಸಹಕರಿಸಿದ ಸಲಕರಣೆ, ಗೋವುಗಳಿಗೆ ನಮಿಸಿ, ಉತ್ತಮ ಬೆಳೆಗಾಗಿ ಬೇಡುವ ರೈತರು ಕುಣಿದು ನಲಿದು ಸಂಭ್ರಮಿಸುತ್ತಾರೆ.
ಎರಡು ಮೂರು ತಿಂಗಳಿನಿಂದ ಮುಂಗಾರು ಮಳೆಯ ನಡುವೆ ಕೃಷಿ ಚಟುವಟಿಕೆ ಪೂರೈಸಿದ ರೈತರು ಬೇಸಾಯಕ್ಕೆ ಸಹಕರಿಸಿದ ನೇಗಿಲು, ನೊಗ, ಹಸುಗಳು, ಕೃಷಿ ಪರಿಕರಗಳೂ ಸೇರಿದಂತೆ ಕೊಡಗಿನ ಜನರ ಧಾರ್ಮಿಕ ಸಂಕೇತವಾದ ಕೋವಿ-ಕತ್ತಿಗಳನ್ನಿಟ್ಟು ಪೂಜಿಸಿ ವಂದಿಸುತ್ತಾರೆ. ಸುಸೂತ್ರವಾಗಿ ಕೃಷಿ ಚಟುವಟಿಕೆ ಮುಗಿಸಿದ ಸಂಭ್ರಮದಲ್ಲಿ ಎಲ್ಲರೂ ಒಂದೆಡೆ ಕಲೆತು ಕುಣಿದು ನಲಿದು ಹಬ್ಬವನ್ನಾಚರಿಸುತ್ತಾರೆ. ಇಂದು ಸಿಎನ್ಸಿ ಆಯೋಜಿಸಿದ್ದ ಸಾಮೂಹಿಕ ಕೈಲ್ ಪೋದ್ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಿದ್ದು, ಕೃಷಿಯೊಂದಿಗೆ ಬೆಸೆದುಕೊಂಡ ಕೊಡವರ ಸಂಸ್ಕೃತಿಯನ್ನು ನೆನೆಯಲಾಯಿತು.