ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಕೊಡವ ಸಮುದಾಯದಿಂದ ಪ್ರತಿಭಟನೆ - kodagu Protest news

ಸಿದ್ದರಾಮಯ್ಯ ಹೇಳಿಕೆಯಿಂದ ಕೊಡವ ಸಮುದಾಯಕ್ಕೆ ಅಪಮಾನವಾಗಿದೆ. ಅವರು ಕೊಡವರಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿ ಕೊಡವ ಸಮುದಾಯದವರು ಪ್ರತಿಭಟನೆ ನಡೆಸಿದರು.

Kodava community Protest
ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಕೊಡವ ಸಮುದಾಯದಿಂದ ಪ್ರತಿಭಟನೆ

By

Published : Dec 21, 2020, 3:56 PM IST

ಕೊಡಗು:ಕೊಡವರು ಗೋ ಮಾಂಸ ತಿನ್ನುತ್ತಾರೆ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೊಡವ ಸಮುದಾಯದವರು ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಕೊಡವ ಸಮುದಾಯದಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅವರು, ಸಿದ್ದರಾಮಯ್ಯ ಅಲ್ಲ ಬಿದ್ದರಾಮಯ್ಯ. ಬಾಯಿ ಚಪಲಕ್ಕೆ ಏನೇನೋ ಮಾತನಾಡುತ್ತಿದ್ದಾರೆ. ಒಬ್ಬ ಪ್ರಜ್ಞಾವಂತರಾಗಿ ಹೀಗೆಲ್ಲಾ ಮಾತನಾಡುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಗೋವನ್ನು ಪೂಜ್ಯ ಸ್ಥಾನದಿಂದ ಗೌರವಿಸುವ ಕೊಡವರ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಓದಿ:ಸಿದ್ದರಾಮಯ್ಯರಿಗೆ ಬೀಫ್ ತಿಂದು ಅಭ್ಯಾಸವಿರಬೇಕು: ಶಾಸಕ ಅಪ್ಪಚ್ವು ರಂಜನ್​ ತಿರುಗೇಟು

ಕೊಡಗಿನ ಕುಲ‌ದೇವತೆ ಕಾವೇರಿ, ಇಗ್ಗುತ್ತಪ್ಪ‌ ಕೊಡವ ಕುಲಕ್ಕೆ ಜೈಕಾರ ಹಾಕಿದ ಪ್ರತಿಭಟನಾಕಾರರು, ಸಿದ್ದರಾಮಯ್ಯ ಹೇಳಿಕೆಯಿಂದ ಕೊಡವ ಸಮುದಾಯಕ್ಕೆ ಅಪಮಾನವಾಗಿದೆ. ಅವರ ಹೇಳಿಕೆಗೆ ಕೊಡವರಲ್ಲಿ ಬಹಿರಂಗವಾಗಿ ಕ್ಷಮೆ ಕೋರಬೇಕು. ಹಾಗೆಯೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಇಲ್ಲವಾದರೆ ಜಾತಿ ದೌರ್ಜನ್ಯ ಕಾಯ್ದೆ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಮಡಿಕೇರಿಯ ಕೊಡವ ಸಮಾಜ, ಪೊಮ್ಮಂಪೇಟೆ ಕೊಡವ ಸಮಾಜ ಹಾಗೂ ಮಡಿಕೇರಿ ಹಿತ ರಕ್ಷಣಾ ವೇದಿಕೆಯಿಂದ ಆಗ್ರಹಿಸಲಾಯಿತು.

ABOUT THE AUTHOR

...view details