ಕೊಡಗು: ಸಮೀಪದ ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಮಹಾಸಭೆಯಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಾವಿನ ಮನೆಯಲ್ಲಿ ಮದ್ಯ ಬಳಕೆ ಬೇಡ: ಸರ್ವಾನುಮತದಿಂದ ಕೊಡವ ಸಮಾಜ ಒಪ್ಪಿಗೆ - Convention of the Kodava Society
ಸಾವಿನ ಮನೆಯಲ್ಲಿ ಎಲ್ಲರೂ ದುಃಖದಲ್ಲಿ ಇರುತ್ತಾರೆ. ಈ ವೇಳೆ ಮದ್ಯ ಸೇವನೆ ಸರಿಯಲ್ಲ. ಆದ್ದರಿಂದ, ಸಾವಿನ ಮನೆಯಲ್ಲಿ ಮದ್ಯ ಬಳಕೆ ನಿಷೇಧಿಸಬೇಕೆಂದು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಾವಿನ ಮನೆಯಲ್ಲಿ ಇತ್ತೀಚೆಗೆ ಮದ್ಯ ಬಳಸುವುದು ಹೆಚ್ಚಾಗುತ್ತಿದ್ದು, ಇದು ಕೊಡವ ಜನಾಂಗದ ಸಂಸ್ಕೃತಿಗೆ ಹಾಗೂ ಕೊಡವ ಜನಾಂಗಕ್ಕೆ ಧಕ್ಕೆ ತರುತ್ತಿದೆ. ಸಾವಿನ ಮನೆಯಲ್ಲಿ ಎಲ್ಲರೂ ದುಃಖದಲ್ಲಿ ಇರುತ್ತಾರೆ. ಈ ವೇಳೆ ಮದ್ಯ ಸೇವನೆ ಸರಿಯಲ್ಲ. ಆದ್ದರಿಂದ, ಸಾವಿನ ಮನೆಯಲ್ಲಿ ಮದ್ಯ ಬಳಕೆ ನಿಷೇಧಿಸಬೇಕೆಂದು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಈಗಾಗಲೇ ನೆಮ್ಮಲೆ ಹಾಗೂ ವಗರೆ ಗ್ರಾಮಗಳಲ್ಲಿ ನಿಷೇಧಿಸಿರುವಂತೆ ತಾವಳಗೇರಿ ಮೂಂದ್‌ನಾಡ್ ವ್ಯಾಪ್ತಿಗೆ ಒಳ ಪಡುವ ಎಲ್ಲ ಗ್ರಾಮಗಳಲ್ಲೂ ಸಾವಿನ ಮನೆಯಲ್ಲಿ ಮದ್ಯ ಬಳಕೆ ನಿಷೇಧಿಸುವಂತೆ ಆಯಾ ಗ್ರಾಮಗಳ ಹಾಗೂ ಕೊಡವ ಕುಟುಂಬಗಳ ಮಹಾಸಭೆ ಮತ್ತಿತರ ಕಾರ್ಯಕ್ರಮಗಳಲ್ಲಿ ಕೊಡವ ಸಮಾಜದ ಆಡಳಿತ ಮಂಡಳಿ ನಿರ್ದೇಶಕರು ಹಾಜರಾಗಿ ಮನವೊಲಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.