ಕೊಡಗು: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಜೊತೆಗೆ ಮತ್ತೊಂದು ಅಪರೂಪದ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಬಂಧಿಸುವಲ್ಲಿ ಮಡಿಕೇರಿ ಅರಣ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪರೂಪದ ಆಮೆ ಮಾರಾಟಕ್ಕೆ ಯತ್ನ: ಆರೋಪಿ ಅಂದರ್ - Turtle Sale case
ಅಬ್ದುಲ್ ಹಮೀದ್ ಎಂಬ ಆರೋಪಿ ಒಂದು ಜೀವಂತ ನಕ್ಷತ್ರ ಆಮೆ ಮತ್ತೊಂದು ಜೀವಂತ ಅಪರೂಪದ ಆಮೆಯನ್ನು ಮಾರಾಟ ಮಾಡಲು ಯತ್ನಿಸಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
![ಅಪರೂಪದ ಆಮೆ ಮಾರಾಟಕ್ಕೆ ಯತ್ನ: ಆರೋಪಿ ಅಂದರ್ Kodagu Turtle Sale case](https://etvbharatimages.akamaized.net/etvbharat/prod-images/768-512-03:57:49:1598351269-kn-kdg-02-24-20-arrested-av-7207093-25082020155304-2508f-01686-1035.jpg)
Kodagu Turtle Sale case
ಮಡಿಕೇರಿ ತಾಲೂಕಿನ ಎಂ.ಬಾಡಗ ಗ್ರಾಮದಲ್ಲಿ ಅಬ್ದುಲ್ ಹಮೀದ್ ಎಂಬ ಆರೋಪಿ ಒಂದು ಜೀವಂತ ನಕ್ಷತ್ರ ಆಮೆ ಮತ್ತೊಂದು ಜೀವಂತ ಅಪರೂಪದ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಆ ಕೂಡಲೇ ಎಚ್ಚೆತ್ತುಕೊಂಡ ಮಡಿಕೇರಿ ಅರಣ್ಯ ಸಂಚಾರಿ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.