ಕರ್ನಾಟಕ

karnataka

ETV Bharat / state

ಸಿಬ್ಬಂದಿ ವೇಷದಲ್ಲಿ ಕೊಡಗು ಜಿಲ್ಲಾಸ್ಪತ್ರೆಗೆ ನುಗ್ಗಿದ ಖದೀಮ.. ಬ್ಯಾಗ್,​ ಬೈಕ್​ ಎಗರಿಸಿ ಪರಾರಿ - ಇನ್ಸ್​ಪೆಕ್ಟರ್ ಶೀನಿವಾಸ್

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯ ರೀತಿಯಲ್ಲಿ ಎಂಟ್ರಿ ಕೊಟ್ಟ ಖದೀಮ ಸುಮಾರು 1 ಗಂಟೆಗಳ‌ ಕಾಲ ವೈದ್ಯರು ಇಟ್ಟ ಬ್ಯಾಗ್​ಗಳ ಕೊಠಡಿಯ ಸುತ್ತಮುತ್ತ ಓಡಾಡಿದ್ದಾನೆ. ನಂತರ ಯಾರೂ ಇಲ್ಲದ ಸಮಯ ನೋಡಿಕೊಂಡು ಕೊಠಡಿಯಲ್ಲಿದ್ದ ಬ್ಯಾಗ್​ಗಳನ್ನು ಕದ್ದು ಅದರಲ್ಲಿದ್ದ ಎಟಿಎಂ ಹಾಗೂ ಗಾಡಿಗಳ ಕೀ ಎಗರಿಸಿದ್ದಾನೆ.

Kodagu: Theft in District Hospital
ಕೊಡಗು: ಜಿಲ್ಲಾ ಆಸ್ಪತ್ರೆಯಲ್ಲಿ ಕಳ್ಳತನ

By

Published : Nov 28, 2022, 7:54 PM IST

Updated : Nov 28, 2022, 8:28 PM IST

ಮಡಿಕೆರಿ(ಕೊಡಗು): ಆಸ್ಪತ್ರೆ ಒಳಗೆ ಆರು ಬ್ಯಾಗ್​ಅನ್ನು ಕದ್ದು, ಪಾರ್ಕಿಂಗ್​ನಲ್ಲಿದ್ದ ಆ್ಯಕ್ಟಿವಾ ಹೋಂಡಾವನ್ನು ಕದ್ದೊಯ್ದಿರುವ ಘಟನೆ ಕೊಡಗಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕಳ್ಳತನ ಮಾಡಿರುವ ವಿಡಿಯೋ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ‌ಸೆರೆಯಾಗಿದೆ. ಮಡಿಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶ್ವಾನದಳದ ಮೂಲಕ ಪರಿಶೀಲನೆ ನಡೆಸಿದ್ದಾರೆ. ಕಳ್ಳನ ಗುರುತು ಪತ್ತೆಯಾಗಿಲ್ಲ. ಆದರೆ ಕಳ್ಳತನವಾಗಿದ್ದ ಬ್ಯಾಗ್​ಗಳು ದೊರಕಿದ್ದು, ಅದರಲ್ಲಿದ್ದ ಹಣ ಮತ್ತು ವಸ್ತುಗಳು ಕಾಣೆಯಾಗಿವೆ.

ಸಿಬ್ಬಂದಿ ವೇಷದಲ್ಲಿ ಕೊಡಗು ಜಿಲ್ಲಾಸ್ಪತ್ರೆಗೆ ನುಗ್ಗಿದ ಖದೀಮ

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯ ರೀತಿಯಲ್ಲಿ ಎಂಟ್ರಿ ಕೊಟ್ಟ ಖದೀಮ ಸುಮಾರು 1 ಗಂಟೆ ಕಾಲ ವೈದ್ಯರು ಇಟ್ಟ ಬ್ಯಾಗ್​ಗಳ ಕೊಠಡಿಯ ಸುತ್ತಮುತ್ತ ಓಡಾಡಿದ್ದಾನೆ. ನಂತರ ಯಾರು ಇಲ್ಲದ ಸಮಯ ನೋಡಿಕೊಂಡು ಕೊಠಡಿಯಲ್ಲಿದ್ದ ಬ್ಯಾಗ್​ಗಳನ್ನು ಕದ್ದು, ಅದರಲ್ಲಿದ್ದ ಎಟಿಎಂ ಹಾಗೂ ಗಾಡಿಗಳ ಕೀ ಎಗರಿಸಿದ್ದಾನೆ. ನಂತರ ಅಲ್ಲಿ ಸಿಕ್ಕ ಕೀ ಬಳಸಿ ಆಸ್ಪತ್ರೆ ಬಂದಿದ್ದ ರೋಗಿಯ ಬೈಕ್​ ಜೊತೆ ಪರಾರಿಯಾಗಿದ್ದಾನೆ.

ಕೊಡಗು: ಜಿಲ್ಲಾ ಆಸ್ಪತ್ರೆಯಲ್ಲಿ ಕಳ್ಳತನ

ಘಟನಾ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸ್ ಇನ್ಸ್​ಪೆಕ್ಟರ್ ಶೀನಿವಾಸ್ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ರ್‍ಯಾಗಿಂಗ್‌ನಿಂದ ಪಾರಾಗಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿ: ಸ್ಥಿತಿ ಗಂಭೀರ

Last Updated : Nov 28, 2022, 8:28 PM IST

ABOUT THE AUTHOR

...view details