ಕರ್ನಾಟಕ

karnataka

ETV Bharat / state

ಅಮೆರಿಕಾದಿಂದ ಕೊಡಗಿಗೆ 53 ಆಕ್ಸಿಜನ್ ಕಾನ್ಸಂಟ್ರೇಟರ್ಸ್​​​ ಕೊಡುಗೆ - ಆಕ್ಸಿಜನ್ ಕಾನ್ಸ್​​ನ್​​ಟ್ರೇಟರ್ಸ್​​

ಅಮೆರಿಕಾದಲ್ಲಿರುವ ಭಾರತೀಯ ವೈದ್ಯರು ಹಾಗೂ ಯುಎಸ್​​ನ gofundme.org ವತಿಯಿಂದ ಕೊಡಗು ಜಿಲ್ಲೆಗೆ ಒಟ್ಟು 53 ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ನೀಡಲಾಗಿದೆ.

oxygen
oxygen

By

Published : May 23, 2021, 9:40 PM IST

Updated : May 23, 2021, 10:03 PM IST

ಕೊಡಗು :ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ವೈದ್ಯರು ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ನೀಡುವ ಮೂಲಕ ರಾಜ್ಯದ ಕೊರೊನಾ ಸಂಕಷ್ಟಕ್ಕೆ ನೆರವಾಗಿದ್ದಾರೆ.

ಅಮೆರಿಕಾದ ನ್ಯೂಜೆರ್ಸಿಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ಡಾ. ಚೊಟ್ಟೇರ ಶೋಭಾ ಟುಟ್ಟು ಹಾಗೂ ಯುಎಸ್​​ನ gofundme.org ವತಿಯಿಂದ ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಗೆ 5 ಮತ್ತು 10 ಲೀಟರ್ ಸಾಮರ್ಥ್ಯದ 53 ಆಕ್ಸಿಜನ್ ಕಾನ್ಸಂಟ್ರೇಟರ್ ಉಪಕರಣಗಳನ್ನು ಕೊಡುಗೆಯಾಗಿ ನೀಡಲಾಗಿದೆ

ಅಮೆರಿಕಾದಿಂದ ಕೊಡಗಿಗೆ 53 ಆಕ್ಸಿಜನ್ ಕಾನ್ಸಂಟ್ರೇಟರ್ಸ್​​​ ಕೊಡುಗೆ

ಈ ಕಾನ್ಸಂಟ್ರೇಟರುಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು. ಅವರೇಮಾದಂಡ ಕೆ. ಮೊಣ್ಣಪ್ಪ (ನಿವೃತ್ತ ಐಎಎಸ್ ಅಧಿಕಾರಿ) ಅವರ ಪ್ರಯತ್ನದಿಂದ ಅಮೆರಿಕದಿಂದ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದ್ದು, ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಡಾ. ಚೊಟ್ಟೇರ ಶೋಭಾ ಟುಟ್ಟು ಅವರು ಈ ಉಪಕರಣಗಳನ್ನು ಕಳುಹಿಸಿದ್ದಾರೆ ಎಂದು ಡಾ. ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.

1984 ರಲ್ಲಿ ದೆಹಲಿಯ ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುತ್ತಿದ್ದ ಡಾ.ಶುಭ ವರ್ಮ, ಮೀರಾ ವೆಲ್ಸ್ ಇತರ ಭಾರತೀಯ ವೈದ್ಯರು ಸಹಕಾರ ನೀಡಿದ್ದಾರೆ ಎಂದು ಡಾ.ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೇರಿದಂತೆ ಅಮೆರಿಕಾದಲ್ಲಿರುವ ವೈದ್ಯರ ವ್ಯಾಟ್ಸ್​ಆ್ಯಪ್​ ಗುಂಪು ಮಾಡಿ, ಚರ್ಚಿಸಿ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ ಎಂದು ಡಾ. ಕಾವೇರಪ್ಪ ಹೇಳಿದ್ದಾರೆ.

Last Updated : May 23, 2021, 10:03 PM IST

ABOUT THE AUTHOR

...view details