ಕರ್ನಾಟಕ

karnataka

By

Published : Apr 2, 2019, 7:53 AM IST

ETV Bharat / state

ಸೌತ್​​​ ಏಷ್ಯನ್​​ ಚಾಂಪಿಯನ್​​ಶಿಪ್​ನಲ್ಲಿ ಕೊಡಗು ಕುವರಿಯ ಸಾಧನೆ

ಇತ್ತೀಚೆಗೆ ಬೆಂಗಳೂರಿನಲ್ಲಿ ಏಷ್ಯನ್ ಥ್ರೋ ಬಾಲ್ ಫೆಡರೇಷನ್ ಹಾಗೂ ಥ್ರೋ ಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕು ರಾಷ್ಟ್ರಗಳ ಸೌತ್ ಏಷ್ಯನ್ ಚಾಂಪಿಯನ್​ಶಿಪ್​ನಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಕೊಡಗು ಕುವರಿ

ಕೊಡಗು:ಕ್ರೀಡಾ ಕಾಶಿ ಕೊಡಗಿನಿಂದ ಒಂದಲ್ಲಾ ಒಂದು ಪ್ರತಿಭೆಗಳು ಹೊರಹೊಮ್ಮುತ್ತಲೇ ಇರುತ್ತಾರೆ. ಇದೀಗ ಥ್ರೋ ಬಾಲ್ ಸರದಿ.

ಹೌದು, ಇತ್ತೀಚೆಗೆ ಬೆಂಗಳೂರಿನಲ್ಲಿ ಏಷ್ಯನ್ ಥ್ರೋ ಬಾಲ್ ಫೆಡರೇಷನ್ ಹಾಗೂ ಥ್ರೋ ಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕು ರಾಷ್ಟ್ರಗಳ ಸೌತ್ ಏಷ್ಯನ್ ಚಾಂಪಿಯನ್​​ಶಿಪ್​ನಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇದರಲ್ಲಿ ತಂಡವನ್ನು ಪ್ರತಿನಿಧಿಸಿದ ಕೊಡಗಿನ ಆಟಗಾರ್ತಿ ರೀಮಾ ಅಪ್ಪಚ್ಚು ಅವರ ಉತ್ತಮ ಪ್ರದಶನದಿಂದ ಫೈನಲ್​ನಲ್ಲಿ ಜಯ ಸಾಧಿಸಲು ಸಾಧ್ಯವಾಗಿದ್ದು, ಇವರು ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಸೌತ್ ಏಷ್ಯನ್ ಚಾಂಪಿಯನ್ ಶಿಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 2-0 ನೇರ ಸೆಟ್​ಗಳಿಂದ ಭಾರತೀಯ ಮಹಿಳಾ ತಂಡ ಗೆಲುವು ಸಾಧಿಸಿದೆ.

ಪುರುಷ ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ಭಾರತ ಜಯ ಸಾಧಿಸಿದ್ದು, ಮಹಿಳಾ ವಿಭಾದ ಮುಂಚೂಣಿ ಆಟಗಾರ್ತಿ ಎಂದು ರೀಮಾ ಅಪ್ಪಚ್ಚು ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಪಂದ್ಯಾವಳಿಯಲ್ಲಿ ಭಾರತ ಸೇರಿದಂತೆ ಬಾಂಗ್ಲಾದೇಶ, ಮಲೇಶಿಯಾ ಹಾಗೂ ನೇಪಾಳ ತಂಡಗಳು ಭಾವಹಿಸಿದ್ದವು. ಫೈನಲ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧ 2-0 ನೇರ ಸೆಟ್​​​ಗಳಿಂದ ಭಾರತೀಯ ಮಹಿಳಾ ತಂಡ ಗೆಲುವು ಸಾಧಿಸಿದೆ.

ABOUT THE AUTHOR

...view details