ಕೊಡಗು:ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟವರ ಸಾಲಿಗೆ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿದೆ.
ಕೊಡಗು ಪ್ರವಾಹ-ಭೂಕುಸಿತ ಪ್ರಕರಣ: ಸಾವಿನ ಸಂಖ್ಯೆ 13ಕ್ಕೆ ಏರಿಕೆ - ಪ್ರಕೃತಿ ವಿಕೋಪ
ಕೊಡಗು ಪ್ರವಾಹ-ಭೂಕುಸಿತ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಗೊಂಡಿದೆ.
ಸೋಮವಾರಪೇಟೆ ತಾಲೂಕಿನ ಮಾದ್ರೆ ಗ್ರಾಮದ ನಿವಾಸಿ ದೊಡ್ಡಯ್ಯ ಎಂಬುವರ ಮೃತದೇಹ ಕೆರೆ ಅಂಗಳದಲ್ಲಿ ಪತ್ತೆಯಾಗಿದೆ. ಇವರು ಕಳೆದ ಶನಿವಾರ ಗದ್ದೆ ಬಳಿ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು ಎನ್ನಲಾಗಿದ್ದು, ಪ್ರವಾಹ ಹಿನ್ನಲೆ ನೀರಿನಲ್ಲಿ ಮುಳುಗಿ ದೊಡ್ಡಯ್ಯ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾಣೆಯಾದ 6 ದಿನಗಳ ಬಳಿಕ ಅವರ ಕೆರೆಯಲ್ಲಿಯೇ ಮೃತದೇಹ ಸಿಕ್ಕಿದೆ. ಈ ಸಂಬಂಧ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಒಟ್ಟಾರೆ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಬಲಿಯಾದವ್ರ ಸಂಖ್ಯೆ 13 ಏರಿಕೆ ಯಾದಂತಾಗಿದ್ದು, ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಗುಡ್ಡ ಕುಸಿತದಿಂದ ಕಣ್ಮರೆ ಆಗಿರುವ 4 ಮಂದಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ.