ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ 'ನಿಫಾ' ಭೀತಿ: ಹೈ ಆಲರ್ಟ್ ಘೋಷಿಸಿದ ಜಿಲ್ಲಾಡಳಿತ - ನಿಫಾ ವೈರಸ್​ ಸೋಂಕಿನ ಲಕ್ಷಣ

ಕೊಡಗು ಜಿಲ್ಲೆ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದೆ. ಇನ್ನು ಈಗಾಗಲೇ ಕೇರಳದಲ್ಲಿ ನಿಫಾ ವೈರಸ್​ ಪತ್ತೆಯಾಗಿದ್ದು,12 ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಲಾಗಿದೆ.

kodagu
ಹೈ ಆಲರ್ಟ್ ಘೋಷಿಸಿದ ಕೊಡಗು ಜಿಲ್ಲಾಡಳಿತ

By

Published : Sep 8, 2021, 6:46 AM IST

Updated : Sep 8, 2021, 11:57 AM IST

ಕೊಡಗು: ಕೊರೊನಾ ಭೀತಿಯಿಂದ ಹೊರಬರಲು ಸಾಹಸಪಡುತ್ತಿರುವ ಕೊಡಗು ಜನರಿಗೆ ಇದೀಗ ನಿಫಾ ವೈರಸ್ ಹರಡುವ ಆತಂಕ ಎದುರಾಗಿದೆ. ಇನ್ನು ಈಗಾಗಲೇ ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್​ಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಕೊಡಗು ಜಿಲ್ಲೆ ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದೆ. ಇನ್ನು ಈಗಾಗಲೇ ಕೇರಳದಲ್ಲಿ ನಿಫಾ ವೈರಸ್​ ಪತ್ತೆಯಾಗಿದ್ದು,12 ವರ್ಷದ ಬಾಲಕ ಕೊನೆಯುಸಿರೆಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮುಂಜಾಗ್ರತಾ ಕ್ರಮ ವಹಿಸಿಕೊಳ್ಳಲಾಗಿದೆ. ಕೊಡಗು ಗಡಿಭಾಗದಿಂದ ಜನರು ಮತ್ತು ಕೇರಳದಿಂದ ಆಮದು ಆಗುವಂತಹ ಹಣ್ಣುಗಳನ್ನು ಬಳಕೆ ಮಾಡಲು ಕೊಡಗಿನ ಜನರು ಭಯಪಡುತ್ತಿದ್ದಾರೆ.

ಹೈ ಆಲರ್ಟ್ ಘೋಷಿಸಿದ ಕೊಡಗು ಜಿಲ್ಲಾಡಳಿತ

ಕೇರಳದಲ್ಲಿ 2018ರಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದ್ದು 17 ಜನ ಮೃತಪಟಿದ್ದರು. ಆ ಬಳಿಕ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ, ಇದೀಗ ಮತ್ತೆ ಕಂಡು ಬಂದಿದ್ದು ಜನರ ಆತಂಕ ಮತ್ತಷ್ಟು ಹೆಚ್ಚು ಮಾಡಿದೆ. ಇನ್ನು ಕೇರಳದಿಂದ ಆಮದಾಗುವ ಎಲ್ಲ ವಿಧದ ಹಣ್ಣುಗಳನ್ನು ಸದ್ಯಕ್ಕೆ ತಡೆಹಿಡಿಯಬೇಕು ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಜಿಲೆಗೆ ಬರುವ ಜನರನ್ನು ಗಡಿಭಾಗದಲ್ಲಿ ತಪಾಸಣೆ ಮಾಡಿ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲಾಡಳಿತದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ನಿಫಾ ವೈರಸ್ ಪತ್ತೆಯಾಗಿಲ್ಲ. ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಡಿಎಚ್ಒ ಡಾ. ವೆಂಕಟೇಶ್ ಹೇಳಿದ್ದಾರೆ.

Last Updated : Sep 8, 2021, 11:57 AM IST

ABOUT THE AUTHOR

...view details