ಕೊಡಗು:ಕೊರೊನಾ ಕಾರಣದಿಂದಾಗಿ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದ ಖಾಸಗಿ ಬಸ್ ಚಾಲಕರಿಗೆ ಜೆಡಿಎಸ್ ಜಿಲ್ಲಾ ಘಟಕದಿಂದ ಆಹಾರ ಕಿಟ್ ವಿತರಿಸಲಾಯಿತು.
ಕೊಡಗು: ಖಾಸಗಿ ಬಸ್ ಕಾರ್ಮಿಕರಿಗೆ ಜೆಡಿಎಸ್ ವತಿಯಿಂದ ಆಹಾರ ಕಿಟ್ ವಿತರಣೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳನ್ನು ಸುಮಾರು 150 ಬಸ್ ಚಾಲಕರಿಗೆ ವಿತರಿಸಲಾಯಿತು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಲಾಕ್‌ಡೌನ್ ನಂತರ ಬಸ್ ಚಾಲಕರ ಸಂಘ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ.
ಸರ್ಕಾರ ಕೆಲವೊಂದು ಷರತ್ತಿನ ಮೇಲೆ ಲಾಕ್‌ಡೌನ್ ಸಡಿಲಗೊಳಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ಸಾರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಇಂದಿನ ಸಂಕಷ್ಟದ ಸಮಯದಲ್ಲಿ ಎಲ್ಲರೂ ಪಕ್ಷಾತೀತವಾಗಿ ಸಹಾಯ ಮಾಡಬೇಕಿದೆ. ಸುಮಾರು 150 ಕಿಟ್‌ಗಳನ್ನು ವಿತರಿಸಿದ್ದು, ಹೀಗೆಯೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಿಗೆ ಅಳಿಲು ಸೇವೆ ಮಾಡುವುದಾಗಿ ತಿಳಿಸಿದರು.
ಲಾಕ್‌ಡೌನ್ ಬಳಿಕ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಆರ್ಥಿಕ ತೊಂದರೆ ಅನುಭವಿಸಿದ್ದೇವೆ. ಲಾಕ್‌ಡೌನ್ ಸಡಿಲದ ಬಳಿಕವೂ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ. ಹೀಗೆ ದಾನಿಗಳು ನೀಡುತ್ತಿರುವ ಅಲ್ಪ-ಸ್ವಲ್ಪ ಸಹಾಯದಿಂದ ಬದುಕು ನಡೆಯುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಜೆಡಿಎಸ್ ವತಿಯಿಂದ ಕಿಟ್ ವಿತರಿಸಿರುವುದು ನಮಗೆ ಸಂತಸ ತಂದಿದೆ ಎಂದು ಚಾಲಕರು ತಿಳಿಸಿದ್ದಾರೆ.