ಮಡಿಕೇರಿ(ಕೊಡಗು):ಕೊಡಗಿನಲ್ಲಿ ಮುಂಗಾರು ಆರಂಭವಾಗಿದ್ದು ಜಿಲ್ಲೆಯ ನದಿ, ತೊರೆಗಳು, ಜಲಪಾತಗಳಿಗೆ ಕಳೆ ಬಂದಿದೆ. ಅರ್ಧ ಚಂದ್ರಾಕೃತಿಯ ಚಿಕ್ಲಿಹೊಳೆ ಜಲಾಶಯ ಧುಮ್ಮಿಕ್ಕಿ ಹರಿಯುತ್ತಿದ್ದು, ಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.
ಕಣ್ಮನ ಸೆಳೆಯುತ್ತಿದೆ ಚಿಕ್ಲಿಹೊಳೆ ಜಲಾಶಯ. ಜಿಲ್ಲೆಯ ಕುಶಾಲನಗರ ಸಮೀಪದ ದುಬಾರೆ ಆನೆಕ್ಯಾಂಪ್ಗೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಚಿಕ್ಲಿಹೊಳೆ ಜಲಾಶಯವಿದೆ. ಬೆಟ್ಟ ಗುಡ್ಡಗಳ ನಡುವೆ ಹರಿದು ಬರುವ ನೀರನ್ನು ಕೃಷಿಗೆ ಬಳಸುವ ಉದ್ದೇಶದಿಂದ ಅಣೆಕಟ್ಟು ಕಟ್ಟಲಾಗಿದೆ. ಇದಕ್ಕೆ ಚಿಕ್ಲಿಹೊಳೆ ಜಲಾಶಯ ಎಂದು ಹೆಸರಿಡಲಾಗಿದೆ.
ಜಲಾಶಯನದ ನಡುವೆ ಕಾಲುವೆ ನಿರ್ಮಾಣ ಮಾಡಿ ರೈತರಿಗೆ ನೀರು ಪೂರೈಸಲಾಗ್ತಿದೆ. ಹೊಳೆ ಅಂಚಿನಲ್ಲಿ ವೃತ್ತಾಕಾರದಲ್ಲಿ ಕಟ್ಟೆ ಕಟ್ಟಲಾಗಿದ್ದು, ಕಾಲುವೆಗೆ ನೀರು ಬಿಡಲಾಗಿದೆ. ಇಲ್ಲಿ ಬೆಟ್ಟ ಗುಡ್ಡಗಳಿಂದ ನೀರು ಹರಿದು ಬಂದು ವೃತ್ತಾಕಾರದಲ್ಲಿ ನೀರು ಹರಿಯುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಇದನ್ನೂ ಓದಿ:ನೀರಿನ ರಭಸ ಲೆಕ್ಕಿಸದೆ ಮುನ್ನುಗ್ಗಿದ ಬೈಕ್ ಸವಾರ: ಚಿಕ್ಕೋಡಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ
ಚಿಕ್ಲಿಹೊಳೆ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತಿದೆ. ವೃತ್ತಾಕಾರದಲ್ಲಿ ಹಾಲ್ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿರುವ ಜಲಾಶಯ ನೋಡಲು ಪ್ರವಾಸಿಗರ ಬರುತ್ತಿದ್ದು, ಸಖತ್ ಎಂಜಾಯ್ ಮಾಡ್ತಿದ್ದಾರೆ.