ಕೊಡಗು:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿ ಸಂಪತ್ ಆರ್ಎಸ್ಎಸ್ ಕಾರ್ಯಕರ್ತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಮಡಿಕೇರಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಪತ್ ಕುರಿತಾಗಿ ಪ್ರತಿಕ್ರಿಯಿಸಿ, ಆತ ಆರ್ಎಸ್ಎಸ್ ಕಾರ್ಯಕರ್ತನೂ ಆಗಿರಬಹುದು. ಸಂಘದ ಕಾರ್ಯಕರ್ತನಾಗಿದ್ದು ಗಣವೇಶ ಧರಿಸಿ ಬೈಟಕ್ನಲ್ಲೂ ಭಾಗವಹಿಸಿರಬಹುದು. ಹಾಗಂತ ಆತ ಬಿಜೆಪಿ ಕಾರ್ಯಕರ್ತನಲ್ಲ ಎಂದು ಹೇಳಿದರು.
ಮೊಟ್ಟೆ ಎಸೆದ ಸಂಪತ್ ಆರ್ಎಸ್ಎಸ್ ಕಾರ್ಯಕರ್ತನೇ: ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷನ ಪ್ರತಿಕ್ರಿಯೆ ಹೀಗಿದೆ ಇದನ್ನೂ ಓದಿ:ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಜೀವಿಜಯ ಮತ್ತೊಂದು ಬಾಂಬ್
ಅಲ್ಲದೇ, ಆರ್ಎಸ್ಎಸ್ ಕಾರ್ಯಕರ್ತನಾದವನು ಬಿಜೆಪಿಯಲ್ಲೇ ಇರಬೇಕು ಎಂದೇನಿಲ್ಲ. ಯಾವ ಪಕ್ಷದಲ್ಲಾದರೂ ಇರಬಹುದು. ಪಿ.ಜಿ.ಆರ್.ಸಿಂಧ್ಯಾ, ಉಗ್ರಪ್ಪ ಎಲ್ಲರೂ ಆರ್ಎಸ್ಎಸ್ನಲ್ಲಿದ್ದವರೇ ಆಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಕೊಡಗಿನ ಕಾಳಗಕ್ಕೆ ನಿಷೇಧಾಜ್ಞೆ ಬ್ರೇಕ್: ಆ.26ರ ಕಾಂಗ್ರೆಸ್ ಪ್ರತಿಭಟನೆ, ಬಿಜೆಪಿ ಸಮಾವೇಶ ಮುಂದಕ್ಕೆ