ಕರ್ನಾಟಕ

karnataka

ETV Bharat / state

ಬಾರ್‌ಗಳು ಓಪನ್​​... ಸ್ನೇಹಿತರೊಂದಿಗೆ ಕುಳಿತು ಎಣ್ಣೆ ಹೊಡೆಯೋದೇ ಖುಷಿ ಅಂತಾವ್ರೆ ಮದ್ಯಪ್ರಿಯರು - ಕೊಡಗು ಬಾರ್​​ ಓಪನ್​

ಇಷ್ಟು ದಿನ ಲಾಕ್​ ಆಗಿದ್ದ ಬಾರ್​ಗಳು ಮತ್ತೆ ಬಾಗಿಲು ತೆರೆದ ಹಿನ್ನೆಲೆ ಮದ್ಯ ಪ್ರಿಯರು ಬಾರ್​​ಗಳತ್ತ ಮುಖ ಮಾಡಿದ್ದಾರೆ. ಪ್ರತಿ ಬಾರ್​​ನಲ್ಲಿ ಕೇವಲ ಶೇ. 50% ಜನರಿಗೆ ಅವಕಾಶ ನೀಡಲಾಗಿದೆ.

kodagu bar and restaurant opened
ಬಾರ್‌ಗಳು ಓಪನ್

By

Published : Sep 1, 2020, 5:26 PM IST

ಕೊಡಗು: ಕೊರೊನಾ ಭೀತಿಯಿಂದ ಐದು ತಿಂಗಳು ಮುಚ್ಚಿದ್ದ ಬಾರ್​ಗಳು ಇಂದು ಮತ್ತೆ ತೆರೆದಿರುವುದಕ್ಕೆ ಜನರು ಫುಲ್ ಖುಷಿಯಾಗಿದ್ದಾರೆ. ಬಾರ್​ಗಳು ಓಪನ್ ಆಗುತ್ತಿದ್ದಂತೆ ಮದ್ಯಪ್ರಿಯರು ಸ್ನೇಹಿತರೊಂದಿಗೆ ಬಾರ್​ಗಳತ್ತ ಮುಖ ಮಾಡಿದ್ದಾರೆ.

ಬಾರ್‌ಗಳು ಓಪನ್, ಮದ್ಯ ಪ್ರಿಯರು ಖುಷ್​

ಇಷ್ಟು ದಿನ ಮದ್ಯ ತೆಗೆದುಕೊಂಡು ಹೋಗಿ ಮನೆಯಲ್ಲಿ ಕುಳಿತು ಒಬ್ಬರೇ ಕುಡಿಯಬೇಕಿತ್ತು. ಅದು ಅಷ್ಟೊಂದು ಖುಷಿ ಎನಿಸುತ್ತಿರಲಿಲ್ಲ. ಆದರೆ ಈಗ ಬಾರ್ ಓಪನ್ ಆಗಿರುವುದರಿಂದ ಸ್ನೇಹಿತರೊಂದಿಗೆ ಸೇರಿ ಎಣ್ಣೆ ಹೊಡೆಯೋದೆ ಮಜಾ ಎನ್ನುತ್ತಿದ್ದಾರೆ ಮದ್ಯಪ್ರಿಯರು.

ಆದ್ರೆ ಕೊರೊನಾ ಮುಂಜಾಗ್ರತ ಕ್ರಮವಾಗಿ ಶೇಕಡ 50% ರಷ್ಟು ಗ್ರಾಹಕರಿಗೆ ಮಾತ್ರ ಬಾರ್​ಒಳಗೆ ಕುಳಿತು ಕುಡಿಯಲು ಅವಕಾಶ ನೀಡಲಾಗಿದೆ.

ABOUT THE AUTHOR

...view details