ಮಡಿಕೇರಿ(ಕೊಡಗು):ಬೈಕ್ ಹಾಗೂ ಬಸ್ ನಡುವೆ ಡಿಕ್ಕಿಯಾದ ಪರಿಣಾಮ ಮಗುವೊಂದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಮೈಸೂರು- ಕೊಡಗು ಮುಖ್ಯರಸ್ತೆಯ ಕುಶಾಲನಗರದ ಬೈಚನಹಳ್ಳಿ ಬಳಿ ನಡೆದಿದೆ.
ಬಸ್ ಚಾಲಕನ ನಿರ್ಲಕ್ಷ್ಯ: ಅಪ್ಪ-ಅಮ್ಮನೆದುರೇ ಪ್ರಾಣಬಿಟ್ಟ ಮಗು- ವಿಡಿಯೋ - kushalnagar bike bus accident news
ಮಡಿಕೇರಿಯಿಂದ ಮೈಸೂರು ಕಡೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಚಾಲಕ ಬೈಕ್ ಬರುತ್ತಿರುವುದನ್ನು ಗಮನಿಸದೇ ಓವರ್ ಟೇಕ್ ಮಾಡಿದ ಪರಿಣಾಮ ಮಗುವೊಂದು ಬಲಿಯಾಗಿದೆ.

ಕುಶಾಲನಗರದ ಬೈಚನಹಳ್ಳಿ ಬೈಕ್ ಮತ್ತು ಬಸ್ ನಡುವೆ ಅಪಘಾತ
ಸೋಮವಾರಪೇಟೆ ತಾಲೂಕಿನ ಗೊಂದಿ ಬಸವನಹಳ್ಳಿಯ ನಿವಾಸಿ ಗೀತಾ ಮತ್ತು ಪರಮೇಶ್ ದಂಪತಿ ಗಾಯಗೊಂಡಿದ್ದು, ಅವರ ಪುತ್ರ ಪೃತ್ವಿಕ್ (3) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಡಿಕೇರಿಯಿಂದ ಮೈಸೂರು ಕಡೆ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಚಾಲಕನು ಬೈಕ್ ಬರುತ್ತಿರುವುದನ್ನು ಗಮನಿಸದೆ ಓವರ್ ಟೇಕ್ ಮಾಡಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗ್ತಿದೆ.
ಕುಶಾಲನಗರದ ಬೈಚನಹಳ್ಳಿ ಬಳಿ ಬೈಕ್ ಮತ್ತು ಬಸ್ ನಡುವೆ ಅಪಘಾತ
ದೇವಸ್ಥಾನಕ್ಕೆ ಹೋಗಿದ್ದ ಕುಟುಂಬ ಮರಳಿ ಮನೆಗೆ ಬೈಕ್ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದ್ದು, ಬಸ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಆರೋಪಿಸಲಾಗಿದೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.