ಕರ್ನಾಟಕ

karnataka

ETV Bharat / state

​ಬಡವರು, ಕೋವಿಡ್​ ವಾರಿಯರ್​​ಗಳ ನೆರವಿತೆ ನಿಂತ ಹರ್ಷಿಕಾ, ಭುವನ್​ - Bhuvan

ನಟಿ ಹರ್ಷಿಕಾ ಮತ್ತು ನಟ ಭುವನ್ ಲಾಕ್​ಡೌನ್​ ಎಫೆಕ್ಟ್​ನಿಂದ ನಲುಗಿರುವ ಕಡು ಬಡವರಿಗೆ ಹಾಗೂ ಕೋವಿಡ್​ ವಾರಿಯರ್​ಗಳ ಸಹಾಯಕ್ಕೆ ನಿಂತಿದ್ದಾರೆ. ಬಾಂಧವ & ಭುವನಂ ಸಂಸ್ಥೆ ನೇತೃತ್ವದಲ್ಲಿ ಕಿಟ್ ವಿತರಿಸುತ್ತಿದ್ದಾರೆ.

ಕೊಡಗಿನಲ್ಲಿ ಹರ್ಷಿಕಾ, ಭುವನ್​ರಿಂದ ಬಡವರಿಗೆ,ವಾರಿಯರ್ಸ್​ಗೆ ಕಿಟ್​ ವಿತರಣೆ
ಕೊಡಗಿನಲ್ಲಿ ಹರ್ಷಿಕಾ, ಭುವನ್​ರಿಂದ ಬಡವರಿಗೆ,ವಾರಿಯರ್ಸ್​ಗೆ ಕಿಟ್​ ವಿತರಣೆ

By

Published : May 26, 2021, 7:15 PM IST

ಕೊಡಗು:ಜಿಲ್ಲೆಯಲ್ಲಿ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಬಡ ಜನರಿಗೆ ನಟಿ ಹರ್ಷಿಕಾ ಮತ್ತು ನಟ ಭುವನ್ ಅಗತ್ಯ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ.

ಕೊಡಗಿನಲ್ಲಿ ಹರ್ಷಿಕಾ, ಭುವನ್​ರಿಂದ ಬಡವರಿಗೆ,ವಾರಿಯರ್ಸ್​ಗೆ ಕಿಟ್​ ವಿತರಣೆ

ಬಾಂಧವ & ಭುವನಂ ಸಂಸ್ಥೆ ನೇತೃತ್ವದಲ್ಲಿ ಕೋವಿಡ್ ವಾರಿಯರ್ಸ್‍ಗೆ ಮಡಿಕೇರಿಯಲ್ಲಿ ಹೋಂಗಾರ್ಡ್, ಪೊಲೀಸ್ ಸಿಬ್ಬಂದಿ, ಪತ್ರಕರ್ತರಿಗೆ ಕಿಟ್ ವಿತರಿಸುವ ಮೂಲಕ ಚಾಲನೆ ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ನಟಿ ನಟಿ ಹರ್ಷಿಕಾ, ಸಂಸ್ಥೆ ವತಿಯಿಂದ ಹೆಲ್ಪ್ ಲೈನ್ ನಂ ಕೊಡಲಾಗಿದೆ.ಅದರಲ್ಲಿ‌ ಹಲವಾರು ಕಡು ಬಡವರು ಸಹಾಯ ಕೇಳುಕೊಂಡು ಕಾಲ್ ಮಾಡುತ್ತಾರೆ. ಅಂತವರಿಗೆ ನಾವು ಆಹಾರ ಕಿಟ್ ಔಷಧ ವಿತರಿಸುತ್ತಿದ್ದೇವೆ. ನಾನು ‌ಹುಟ್ಟಿದ ಊರು ಕಷ್ಟದಲ್ಲಿದೆ ಇಂತಹ ಸಮಯದಲ್ಲಿ‌ ನಾವು ಸಹಾಯಕ್ಕೆ ನಿಲ್ಲಬೇಕು ಎಂದಿದ್ದಾರೆ.

ಓದಿ:ಅಯ್ಯೋ ದುರ್ವಿಧಿಯೇ.. COVIDಗೆ ಕುರುಗೋಡಲ್ಲಿ ಒಂದೇ ಕುಟುಂಬದ ಮೂವರು ಬಲಿ!

ABOUT THE AUTHOR

...view details