ಕೊಡಗು:ರೈತರಿಗೆ ಕಿಸಾನ್ ಕಾರ್ಡ್ ನೀಡಿರುವ ರೀತಿಯಲ್ಲೇ ಮೀನು ಸಾಕಾಣಿಕೆಗಾರರಿಗೆ ಕಿಸಾನ್ ಕಾರ್ಡ್ ವಿತರಿಸಲಾಗುವುದು ಎಂದು ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮೀನು ಸಾಕಾಣಿಕೆಗಾರರಿಗೆ ಕಿಸಾನ್ ಕಾರ್ಡ್ ವಿತರಿಸಲಾಗುವುದು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ರೈತರಿಗೆ ಕಿಸಾನ್ ಕಾರ್ಡ್ ನೀಡಿರುವ ರೀತಿಯಲ್ಲೇ ಮೀನು ಸಾಕಾಣಿಕೆಗಾರರಿಗೆ ಕಿಸಾನ್ ಕಾರ್ಡ್ ಹಾಗೂ ರಾಜ್ಯದಲ್ಲಿ ಒಂದು ಸಾವಿರ ಮಹಿಳೆಯರಿಗೆ ಶೇ. 50ರಷ್ಟು ಸಬ್ಸಿಡಿಯಲ್ಲಿ ವಾಹನಗಳ ಸಾಲ ಸೌಲಭ್ಯ ನೀಡಲಾಗುವುದು ಎಂದು ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕೊಡಗಿನಲ್ಲಿರುವ ಕಾಫಿ ಬೆಳೆಗಾರರು ತಮ್ಮ ತೋಟಗಳಲ್ಲೇ ಕೆರೆಗಳನ್ನ ನಿರ್ಮಿಸಿಕೊಂಡು ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮೀನುಗಾರರಿಗೂ ಕಿಸಾನ್ ಕಾರ್ಡ್ ಕೊಡಲಾಗುವುದು ಹಾಗೂ ರಾಜ್ಯದಲ್ಲಿ ಒಂದು ಸಾವಿರ ಮಹಿಳೆಯರಿಗೆ ಶೇ. 50ರಷ್ಟು ಸಬ್ಸಿಡಿಯಲ್ಲಿ ವಾಹನಗಳ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಇನ್ನು, ಮುಜರಾಯಿ ಇಲಾಖೆಗೆ ಶೇ. 30ಕ್ಕಿಂತಲೂ ಹೆಚ್ಚು ನಷ್ಟವಾಗಿದೆ. ಕೊಡಗಿನಲ್ಲಿ 3 ಎ ದರ್ಜೆಯ ದೇವಾಲಯಗಳಿದ್ದು, ಅವುಗಳಲ್ಲಿಯೂ ಸಾಕಷ್ಟು ನಷ್ಟವಾಗಿದೆ. ಕೊಡಗಿನ ದೇವಾಲಯಗಳ ಅಭಿವೃದ್ಧಿಗೆ ಸಾಕಷ್ಟು ಕ್ರಮ ವಹಿಸಲಾಗುವುದು ಎಂದರು.