ಕೊಡಗು: ಇಲ್ಲಿನ ಹೋಂ ಸ್ಟೇಯಲ್ಲಿ ಕೇರಳ ಮೂಲದ ದಂಪತಿ ಮಗು ಸಮೇತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೋಂ ಸ್ಟೇವೊಂದರಲ್ಲಿ ಕೇರಳದ ಕೊಟ್ಟಾಯಂ ಜಿಲ್ಲೆಯ ಪಡಿಚಾಟು ಗ್ರಾಮದ ವಿನೋದ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಡಗು : ಹೋಂಸ್ಟೇನಲ್ಲಿ ಕೇರಳ ಮೂಲದ ದಂಪತಿ ಮಗು ಸಮೇತ ಆತ್ಮಹತ್ಯೆ - ಕೇರಳ ಮೂಲದ ದಂಪತಿ ಆತ್ಮಹತ್ಯೆ
ಕೊಡಗು ಜಿಲ್ಲೆಯ ಮಡಿಕೇರಿಯ ಹೋಂಸ್ಟೇನಲ್ಲಿ ಕೇರಳ ಮೂಲದ ದಂಪತಿಯು ಮಗು ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
![ಕೊಡಗು : ಹೋಂಸ್ಟೇನಲ್ಲಿ ಕೇರಳ ಮೂಲದ ದಂಪತಿ ಮಗು ಸಮೇತ ಆತ್ಮಹತ್ಯೆ kerala couple committed suicide in Madikeri resort](https://etvbharatimages.akamaized.net/etvbharat/prod-images/09-12-2023/1200-675-20228673-thumbnail-16x9-yyy.jpg)
Published : Dec 9, 2023, 9:44 PM IST
|Updated : Dec 9, 2023, 10:07 PM IST
ಶುಕ್ರವಾರ ಸಂಜೆ ಕೊಡಗಿಗೆ ಬಂದಿದ್ದ ಈ ದಂಪತಿ ಮಡಿಕೇರಿ ಬಳಿಯ ಕಗ್ಗೋಡ್ಲು ಗ್ರಾಮದ ಹೋಂ ಸ್ಟೇಯಲ್ಲಿ ಉಳಿದುಕೊಂಡಿದ್ದರು. ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಹಾಸಿಗೆಯಲ್ಲಿ ಮಲಗಿರುವ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದ್ದು, ಮಗುವನ್ನು ಕೊಂದು ಬಳಿಕ ದಂಪತಿ ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುಟುಂಬಸ್ಥರು ಕೇರಳದಿಂದ ಬಂದ ಬಳಿಕ ಆತ್ಮಹತ್ಯೆಗೆ ಕಾರಣ ತಿಳಿದುಬರಲಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ :ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ: ವ್ಯಕ್ತಿಯನ್ನು ಹತ್ಯೆಗೈದ ಪತಿ ಬಂಧನ