ಕರ್ನಾಟಕ

karnataka

ETV Bharat / state

ಇಮ್ಮಡಿಗೊಂಡ ಪ್ರವಾಸಿಗರ ಸ್ವರ್ಗ ಕಾವೇರಿ ನಿಸರ್ಗಧಾಮದ ಸೊಬಗು - kodagu

ಕಾವೇರಿ ನಿಸರ್ಗಧಾಮಕ್ಕೆ ಹೊರರಾಜ್ಯಗಳಿಂದ ಮಾತ್ರವಲ್ಲದೆ, ವಿದೇಶಗಳಿಂದಲೂ ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಕಾವೇರಿ ನಿಸರ್ಗಧಾಮ
ಕಾವೇರಿ ನಿಸರ್ಗಧಾಮ

By

Published : Oct 22, 2021, 7:28 AM IST

ಮಡಿಕೇರಿ: ಕೊಡಗು ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರದಿಂದ ಸ್ವಲ್ಪ ದೂರದಲ್ಲಿರುವ ಕಾವೇರಿ ನಿಸರ್ಗಧಾಮ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಜೀವನದಿ ಕಾವೇರಿ ಸೃಷ್ಟಿಸಿರುವ ದ್ವೀಪಗಳಲ್ಲಿ ಇದು ಕೂಡ ಒಂದಾಗಿದ್ದು, ನದಿ ದಡದುದ್ದಕ್ಕೂ ಬೆಳೆದು ನಿಂತಿರುವ ಮುಗಿಲೆತ್ತರದ ವೃಕ್ಷಗಳು, ಬಿದಿರುಗಳಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳು ನಡುವೆ ಹೊಸದಾಗಿ ನಿರ್ಮಾಣ ಮಾಡಿರುವ ಕಲಾಕೃತಿಗಳು ಮತ್ತು ಚಿತ್ರಕಲೆಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಕಾವೇರಿ ನಿಸರ್ಗಧಾಮ

ನಿಸರ್ಗಧಾಮಕ್ಕೆ ಹೊರರಾಜ್ಯಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರತಿನಿತ್ಯ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರಿಗೆ ಕೊಡಗಿನ ಕಲೆ, ಆಚಾರ, ವಿಚಾರ, ಸಂಸ್ಕೃತಿ, ಉಡುಪು ಸಂಪ್ರದಾಯವನ್ನು ತಿಳಿಸುವ ಉದ್ದೇಶದಿಂದ ಇಲ್ಲಿ ಕೊಡವರ ಬದುಕಿನ ಪರಿಕರಗಳನ್ನು ಅರಣ್ಯ ಇಲಾಖೆ ನಿರ್ಮಾಣ ಮಾಡಿದೆ.

ಆಕರ್ಷಣೆಯ ಕೇಂದ್ರವಾದ ಜಿಂಕೆಗಳು:

ಆನೆಸವಾರಿ ಪಕ್ಕದಲ್ಲಿ ಸುಮಾರು 5 ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾದ ತಂತಿ ಬೇಲಿಯನ್ನು ನಿರ್ಮಿಸಲಾಗಿದೆ. ಈ ವನದಲ್ಲಿ ಹಲವಾರು ಜಿಂಕೆಗಳಿವೆ. ಪ್ರವಾಸಿಗರು ಜಿಂಕೆಗಳಿಗೆ ಹಸಿರು ಹುಲ್ಲು, ಸೌತೆಕಾಯಿಗಳನ್ನು ತಿನ್ನಿಸುತ್ತಾ ಎಂಜಾಯ್​ ಮಾಡುತ್ತಿದ್ದಾರೆ. ಮಕ್ಕಳಿಗೂ ಕೂಡ ಆಟವಾಡುವುದಕ್ಕೆ ತೂಗುಯ್ಯಾಲೆಗಳು, ಏಣಿಯಾಟ, ಉದ್ದಜಿಗಿತಕ್ಕೆ ವ್ಯವಸ್ಥೆ ಸೇರಿದಂತೆ ಆಟದ ಸಾಮಗ್ರಿಗಳಿವೆ.

ABOUT THE AUTHOR

...view details