ಕೊಡಗು: ಕಾರ್ಗಿಲ್ ಕದನದ ವಿಜಯೋತ್ಸವದ ಸ್ಮರಣಾರ್ಥವಾಗಿ ಯುದ್ಧದಲ್ಲಿ ಭಾಗವಹಿಸಿ ಹುತಾತ್ಮರಾದ ಯೋಧರಿಗೆ ಹಿಂದೂಪರ ಸಂಘಟನೆ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.
ಕಾರ್ಗಿಲ್ ಹುತಾತ್ಮ ಯೋಧರಿಗೆ ಕೊಡಗಿನಲ್ಲಿ ಗೌರವ ನಮನ - ಕಾರ್ಗಿಲ್ ಕದನ
ಕೊಡಗಿನಲ್ಲಿ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂಪರ ಸಂಘಟನೆ ಹಾಗೂ ಸೇನೆಯ ನಿವೃತ್ತ ಅಧಿಕಾರಿಗಳು, ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದರು.
ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದೂಪರ ಸಂಘಟನೆ ಹಾಗೂ ಸೇನೆಯ ನಿವೃತ್ತ ಅಧಿಕಾರಿಗಳು ಸ್ಮಾರಕಕ್ಕೆ ಹೂಗುಚ್ಚ ಸಮರ್ಪಿಸಿದರು. ಕಾರ್ಗಿಲ್ ಯುದ್ಧದಲ್ಲಿ ಎದುರಾಳಿಗಳ ಗುಂಡಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ ಸೇನಾನಿಗಳ ತ್ಯಾಗ ಬಲಿದಾನಕ್ಕೆ ಕೆಲಕಾಲ ಮೌನ ಆಚರಣೆ ನಡೆಸಿ ಗೌರವ ಸೂಚಿಸಿದರು.
1999 ರಲ್ಲಿ ಪಾಕಿಸ್ತಾನಿಯರು ಭಾರತದ ಗಡಿಯನ್ನು ಅತಿಕ್ರಮಿಸಿಕೊಂಡಿದ್ದರು. ಆ ವೇಳೆ ಭಾರತೀಯ ಯೋಧರು ಕೆಚ್ಚೆದೆಯಿಂದ ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿದ್ದರು. ಆ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಯೋಧರನ್ನು ಅಭೂತಪೂರ್ವವಾಗಿ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ನಿವೃತ್ತ ಸೇನಾಧಿಕಾರಿ ಚಂಗಪ್ಪ ತಿಳಿಸಿದರು.