ಕೊಡಗು-ಹಾಸನ:ಕಾರ್ಗಿಲ್ ವಿಜಯದ ಸ್ಮರಣಾರ್ಥವಾಗಿ ಕೊಡಗಿನ ಯುದ್ಧ ಸ್ಮಾರಕದ ಬಳಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಲಯನ್ಸ್ ಸಂಸ್ಥೆ ಹಾಗೂ ನಿವೃತ್ತ ಮಾಜಿ ಸೈನಿಕರು ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿ ವಿಜಯೋತ್ಸವ ಸ್ಮರಿಸಿದರು.
ಕೊಡಗು, ಹಾಸನದಲ್ಲಿ ಕಾರ್ಗಿಲ್ ವಿಜಯೋತ್ಸವ; ಹುತಾತ್ಮ ಧೀರ ಯೋಧರ ಸ್ಮರಣೆ - undefined
ಕೊಡಗು ಮತ್ತು ಹಾಸನದಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಗಿದೆ. ಎರಡು ನಿಮಿಷ ಮೌನ ಆಚರಿಸಿದ ಬಳಿಕ ದೇಶಕ್ಕಾಗಿ ಮಡಿದ ಯೋಧರಿಗೆ ಗೌರವ ಸೂಚಿಸಲಾಯಿತು.
ಕೊಡಗು ಮತ್ತು ಹಾಸನದಲ್ಲಿ ಕಾರ್ಗಿಲ್ ವಿಜಯೋತ್ಸವ; ಹುತಾತ್ಮ ಯೋಧರಿಗೆ ನಮನ
ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ತಾಲೂಕು ಕೇಂದ್ರಗಳಲ್ಲೂ ಶ್ರದ್ಧಾ-ಭಕ್ತಿಯಿಂದ ಗೌರವ ವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಸೇನಾನಿ ಆನಂದ್ ಮಾತನಾಡಿ, ಕಾರ್ಗಿಲ್ ಯುದ್ದದ ಸಮಯದಲ್ಲಿ ನಾನೂ ಭಾಗವಹಿಸಿದ್ದೆ. ಇಂದಿನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನನ್ನನ್ನು ಆಹ್ವಾನಿಸಿರುವುದು ಸಂತಸ ತಂದಿದೆ. ಯುವ ಜನತೆ ದೇಶ ಸೇವೆಗೆ ಮುಂದಾಗಬೇಕೆಂದು ಅವರು ಕರೆ ಕೊಟ್ಟರು.
ಹಾಸನದ ಕುವೆಂಪು ನಗರದಲ್ಲಿರುವ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿ ಹುತಾತ್ಮ ಯೋಧರ ಸ್ಮಾರಕದ ಆವರಣದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನ ಆಚರಿಸಲಾಯ್ತು.