ಕರ್ನಾಟಕ

karnataka

ETV Bharat / state

ಶಕ್ತಿದೇವತೆಯ ಕರಗೋತ್ಸವದ ಮೂಲಕ ಮಡಿಕೇರಿ ದಸರಾಗೆ ಅದ್ಧೂರಿ ಚಾಲನೆ - ಕರಗ ಉತ್ಸವ

ಮೈಸೂರು ಅರಸರ ಕಾಲದಿಂದಲೂ ದಸರಾ ಉತ್ಸವದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ, ಶ್ರೀಕಂಚಿ ಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳು ವಿಶೇಷ ಧಾರ್ಮಿಕ ವಿಧಿವಿಧಾನಗಳ ಮೂಲಕ ನಗರ ಸಂಚಾರ ಆರಂಭಿಸಿವೆ.

event-of-karaga-fest-at-madikeri-start-for-next-10-days
ಶಕ್ತಿದೇವತೆಯ ಕರಗ ಮೂಲಕ ವಿದ್ಯುಕ್ತ ಆರಂಭ

By

Published : Oct 8, 2021, 7:22 AM IST

ಮಡಿಕೇರಿ (ಕೊಡಗು): ಮಂಜಿನ ನಗರಿ ಮಡಿಕೇರಿಯಲ್ಲಿ ಐತಿಹಾಸಿಕ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಗರದ ನಾಲ್ಕು ಪ್ರಮುಖ ಶಕ್ತಿದೇವತೆಯ ಕರಗಗಳು ನಗರದಲ್ಲಿ ಪ್ರದಕ್ಷಿಣೆ ಆರಂಭಿಸುವ ಮೂಲಕ ಉತ್ಸವ ಮೆರುಗು ಪಡೆಯಿತು.

ಇಂದಿನಿಂದ 10 ದಿನಗಳವರೆಗೆ ನಡೆಯುವ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮನೆ-ಮನೆಗಳಿಗೆ ತೆರಳಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಕರಗೋತ್ಸವದಲ್ಲಿ 25 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿದೆ.

ಮಡಿಕೇರಿ ದಸರಾ ಮಹೋತ್ಸವಕ್ಕೆ ವಿಜೃಂಭಣೆಯ ಚಾಲನೆ

ಐತಿಹಾಸಿಕ ದಸರಾ ಜನೋತ್ಸವದ ಧಾರ್ಮಿಕ ಆಕರ್ಷಣೆಯಾದ ಕರಗಗಳ ನಗರ ಸಂಚಾರ ಪಂಪಿನ ಕೆರೆ ಬಳಿಯಿಂದ ಆರಂಭಗೊಂಡಿದೆ. ಅರಸರ ಕಾಲದಿಂದಲೂ ದಸರಾ ಉತ್ಸವದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಶ್ರೀಚೌಟಿ ಮಾರಿಯಮ್ಮ, ಶ್ರೀಕಂಚಿ ಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳು ವಿಶೇಷ ಧಾರ್ಮಿಕ ವಿಧಿವಿಧಾನಗಳ ಮೂಲಕ ನಗರ ಸಂಚಾರ ಆರಂಭಿಸಿವೆ.

ಕಳೆದ ವರ್ಷ ‌ಮನೆ ಮನೆಗೆ ಹೋಗಲು ಅವಕಾಶ ಇರಲಿಲ್ಲ. ಆದರೆ, ಈ ಬಾರಿ ಅನುಮತಿ ನೀಡಲಾಗಿದೆ. ಶಕ್ತಿ ದೇವತೆಗಳ ಕರಗಗಳಿಗೆ ಸಂಜೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗೆ ಪ್ರಾರ್ಥಿಸುವ ಮೂಲಕ ಕರಗ ಮೆರವಣಿಗೆ ಆರಂಭಗೊಂಡಿತು.

ಪಂಪಿನ ಕೆರೆಯಿಂದ ಹೊರಟ ಕರಗಗಳು 10 ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಲಿವೆ. ಕೊನೆಯ ದಿನ ಬನ್ನಿ ಪೂಜೆ ಕಾರ್ಯ ನಡೆಯುತ್ತವೆ. ಅಕ್ಟೋಬರ್ 15ರ ರಾತ್ರಿ ವೈಭವಯುತ ಶೋಭಾಯಾತ್ರೆ ನೆರವೇರಲಿದೆ.

ಇದನ್ನೂ ಓದಿ:ದಸರಾ: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಿವಿಧ ಬಗೆಯ ಗೊಂಬೆಗಳು.. ವ್ಯಾಪಾರದಲ್ಲಿ ಕೊಂಚ ಚೇತರಿಕೆ

ABOUT THE AUTHOR

...view details