ಕೊಡಗು: ಕೊಡಗಿನ ಏಕೈಕ ಅಂತಾರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಆಗಿದ್ದ ಹಾಗೂ ಅತ್ಯುತ್ತಮ ಹಾಕಿಪಟು ಅನುಪಮ ಅವರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಹಾಕಿ ಅಂಪೈರ್ ಕೊರೊನಾಗೆ ಬಲಿ - corona update
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತುಂಬಾ ತೀಕ್ಷ್ಣವಾಗಿ ಮುನ್ನುಗ್ಗುತ್ತಿದೆ. ಈ ಕಾರಣಕ್ಕೆ ಹಲವಾರು ಜನರು ಬಲಿಯಾಗುತ್ತಿದ್ದಾರೆ. ಈಗ ಕೊಡಗಿನ ಏಕೈಕ ಅಂತಾರಾಷ್ಟ್ರೀಯ ಮಹಿಳಾ ಹಾಕಿ ಅಂಪೈರ್ ಮಹಾಮಾರಿಗೆ ಜೀವ ತೆತ್ತಿದ್ದಾರೆ.
![ಅಂತಾರಾಷ್ಟ್ರೀಯ ಹಾಕಿ ಅಂಪೈರ್ ಕೊರೊನಾಗೆ ಬಲಿ International hockey umpire died by Corona](https://etvbharatimages.akamaized.net/etvbharat/prod-images/768-512-11458832-thumbnail-3x2-nin.jpg)
ಅಂತಾರಾಷ್ಟ್ರೀಯ ಹಾಕಿ ಅಂಪೈರ್ ಕೊರೊನಾಗೆ ಬಲಿ
ಕಳೆದ ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದ್ದಾರೆ.
ಇವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ದಿ.ಪುಚ್ಚಿಮಂಡ ಶಿವಪ್ಪ ಅವರ ಪುತ್ರಿಯಾಗಿದ್ದಾರೆ. ಪಕ್ಕದ ನೆಲಜಿ ಗ್ರಾಮಕ್ಕೆ ವಿವಾಹವಾಗಿ ಬೆಂಗಳೂರನಲ್ಲಿ ವಾಸವಿದ್ದರು.