ಕೊಡಗು:ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ, ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಕೊಡಗಿನಲ್ಲಿ ಮೋಡ ಕವಿದ ವಾತಾವರಣ: ಕಣ್ಮರೆಯಾದ ನಾಲ್ವರಿಗೆ ತೀವ್ರ ಶೋಧ..! - ತಲಕಾವೇರಿಯಲ್ಲಿ ಕಣ್ಮರೆ ಅದವರಿಗೆ ಹುಡುಕಾಟ
ಕೊಡಗು ಜಿಲ್ಲೆಯಲ್ಲಿ ಎಡಬಿಡದೇ ಸುರಿಯುತ್ತಿದ್ದ ಮಳೆ ಕಡಿಮೆಯಾಗಿದ್ದು, ತಲಕಾವೇರಿಯಲ್ಲಿ ಗುಡ್ಡ ಕುಸಿದು ಕಣ್ಮರೆಯಾದ ನಾಲ್ವರಿಗಾಗಿ ಹುಡುಕಾಟ ಚುರುಕುಗೊಂಡಿದೆ.
ಕಣ್ಮರೆಯಾದ ನಾಲ್ವರಿಗೆ ತೀವ್ರ ಶೋಧ
ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆ ಜಿಲ್ಲಾದ್ಯಂತ ಅವಾಂತರವನ್ನೇ ಸೃಷ್ಟಿಸಿದೆ. ಹಲವೆಡೆ ಭೂ ಕುಸಿತಗಳು ಸಂಭವಿಸಿದರೆ. ಕಾವೇರಿ ವ್ಯಾಪ್ತಿಯಲ್ಲಿ ಪ್ರವಾಹವೇ ಸೃಷ್ಟಿಯಾಗಿತ್ತು. ಆಗಸ್ಟ್ 5 ರಂದು ತಲಕಾವೇರಿಯಲ್ಲಿ ಗುಡ್ಡ ಕುಸಿದು ಇಲ್ಲಿನ ಪ್ರಧಾನ ಅರ್ಚಕರು ಸೇರಿದಂತೆ ಐವರು ಕಣ್ಮರೆಯಾಗಿದ್ದರು.
ಕಳೆದ ಮೂರು ದಿನಗಳ ತೀವ್ರ ಶೋಧದ ಬಳಿಕ ಎನ್‌ಡಿಆರ್‌ಎಫ್ ಸಿಬ್ಬಂದಿ ಕಣ್ಮರೆಯಾಗಿದ್ದವರಲ್ಲಿ ಒಬ್ಬರನ್ನು ಪತ್ತೆ ಹೆಚ್ಚಿದ್ದರು. ಮಳೆ ಕಡಿಮೆ ಇರುವುದರಿಂದ ಇನ್ನುಳಿದ ನಾಲ್ವರಿಗೆ ರಕ್ಷಣಾ ಸಿಬ್ಬಂದಿ ಹುಡುಕಾಟ ಪ್ರಾರಂಭಿಸಿವೆ.