ಕರ್ನಾಟಕ

karnataka

ETV Bharat / state

ಕೊಡಗು ಡಿಸಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ: ವಾಟ್ಸ್ಯಾಪ್​ ಗ್ರೂಪ್​ನ 50 ಸದಸ್ಯರ ವಿಚಾರಣೆ

ಜಿಲ್ಲಾಧಿಕಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಮಡಿಕೇರಿ‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ, 10 ವಾಟ್ಸ್ಯಾಪ್​ ಗ್ರೂಪ್‌ಗಳ ಆಡ್ಮಿನ್​ಗಳು ಹಾಗೂ 50 ಕ್ಕೂ ಹೆಚ್ಚು ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಡಿಸಿ ವಿರುದ್ಧ ಅವಹೇಳನಕಾರಿ ಪೋಸ್ಟ್

By

Published : Sep 23, 2019, 8:24 AM IST

ಮಡಿಕೇರಿ: ನಿರಾಶ್ರಿತರಿಗೆ ಶಾಶ್ವತ ನೆಲೆ ಒದಗಿಸುವ ಉದ್ದೇಶದಿಂದ ಒತ್ತುವರಿ ತೆರವುಗೊಳಿಸಿದ ಜಿಲ್ಲಾಧಿಕಾರಿ ಅನೀಸ್ ಕೆ. ಜಾಯ್ ವಿರುದ್ಧ ವಾಟ್ಸ್ಯಾಪ್ ಗ್ರೂಪ್‌ನಲ್ಲಿ‌ ಕೆಲವರು ಜಾತಿ ವಿರೋಧಿ ಎಂಬ ಪೋಸ್ಟರ್ ಹಾಕಿದ್ದಾರೆ ಎಂಬ ಅರೋಪ ಕೇಳಿಬಂದಿದೆ.

ಜಿಲ್ಲಾಧಿಕಾರಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​​ ಮಾಡಿದವರ ವಿರುದ್ಧ ಮಡಿಕೇರಿ‌ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 10 ವಾಟ್ಸ್ಯಾಪ್​ ಗ್ರೂಪ್‌ಗಳ ಆಡ್ಮಿನ್​ಗಳು ಹಾಗೂ 50 ಕ್ಕೂ ಹೆಚ್ಚು ಸದಸ್ಯರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಕರಣ ದಾಖಲಿಸಿರುವ ಪೊಲೀಸರು ಗ್ರೂಪ್ ಆಡ್ಮಿನ್ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನೆಲ್ಯಹುದಿಕೇರಿ, ಕರಡಿಗೋಡು ಹಾಗೂ ಕುಂಬಾರಗುಂಡಿ ಭಾಗದಲ್ಲಿ ನಿರಾಶ್ರಿತರಿಗೆ ಸೂರು ಕಲ್ಪಿಸಲು ಒತ್ತುವರಿ ತೆರವಿಗೆ ಮುಂದಾಗಿದ್ದ ಜಿಲ್ಲಾಧಿಕಾರಿ ವಿರುದ್ಧ ಕೆಲವರು ಜಿಲ್ಲಾಧಿಕಾರಿ ಕೊಡವ, ಗೌಡ ಸಮುದಾಯದ ವಿರೋಧಿ. ಮಲಯಾಳಿಗರ ಪರ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿತ್ತು.

ABOUT THE AUTHOR

...view details